ಮಣಿಪಾಲ: ದಿನಾಂಕ:15-12-2025(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಎಮ್ಐಟಿ ಕ್ಯಾಂಪಸ್ ನ
ಎನ್ ಸಿಸಿ ಟ್ರೈನಿಂಗ್ ಕ್ಯಾಂಪ್ 2025 ನಲ್ಲಿ ಭಾಗವಹಿಸಿದ ಸುಮಾರು 400 ಮಕ್ಕಳಿಗೆ ಅಪರಾಧ ಮಾಸ 2025 ರ ಅಂಗವಾಗಿ ಮಣಿಪಾಲ ಪೊಲೀಸರು ಕಾನೂನು ಬಗ್ಗೆ ಮಾಹಿತಿ ನೀಡಿದರು.
ಅಪರಾಧ ತಡೆಗಟ್ಟುವಲ್ಲಿ ವಿದ್ಯಾರ್ಥಿ / ಸಾರ್ವಜನಿಕರ ಪಾತ್ರ ಮಹತ್ವದ್ದು ಈ ಬಗ್ಗೆ ಅಪರಾಧ ತಡೆಗಟ್ಟುವಲ್ಲಿ ಪೊಲೀಸ್ ರೊಂದಿಗೆ ಸಹಕರಿಸಲು ಮನವಿಮಾಡಿ ತುರ್ತು ಸಂಧರ್ಭದಲ್ಲಿ 112 ನ್ನು ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ್ ರವರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಮಾಹಿತಿ ನೀಡಿದರು.
