ಕಾರ್ಕಳ: ದಿನಾಂಕ:15-12-2025(ಹಾಯ್ ಉಡುಪಿ ನ್ಯೂಸ್) ನಲ್ಲೂರು ಕಿಂಡಿ ಅಣೆಕಟ್ಟು ಬಳಿ 407 ಟೆಂಪೋದಲ್ಲಿ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಸಮಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಗೌಡ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಗೌಡ ಅವರು ದಿನಾಂಕ 13/12/2025 ರಂದು ನಲ್ಲೂರು ಗ್ರಾಮಕ್ಕೆ ಹೋಗುತ್ತಾ ನಲ್ಲೂರು ಗ್ರಾಮದ ಮಿಯಾರು ಸೇತುವೆ ಬಳಿ ಇರುವ ನಲ್ಲೂರು ಕಿಂಡಿ ಆಣೆಕಟ್ಟು ಬಳಿ ತಲುಪಿದಾಗ 407 ಟೆಂಪೋ ನಂಬ್ರ KAಲ ಏನೋ19-AA-1656 ನೇದರ ಚಾಲಕನು ಸಮವಸ್ತ್ರದಲ್ಲಿದ್ದ ಅವರನ್ನು ನೋಡಿ ಟೆಂಪೋ ನಿಲ್ಲಿಸಿ, ಸ್ಥಳದಿಂದ ಓಡಿ ಪರಾರಿಯಾಗಿದ್ದು, ಟೆಂಪೋ ಬಾಡಿಯನ್ನು ಪರಿಶೀಲಿಸಿದಾಗ ಅದರಲ್ಲಿ, ಸುಮಾರು 8,000/- ರೂಪಾಯಿ ಮೌಲ್ಯದ ಅಂದಾಜು 1 ಯುನಿಟ್ ನಷ್ಠು ಮರಳು ಇದ್ದು, ಸದ್ರಿ ಟೆಂಪೋ ಚಾಲಕ ಮತ್ತು ಮಾಲಕರು ಸಂಘಟಿತರಾಗಿ ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೇ ಸರಕಾರಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ದೂರು ನೀಡಿದ್ದಾರೆ. ಹಾಯ್
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 303(2), 112(1) , R/w 3(5) BNS, U/s. 66 R/W 192(A) IMV ACT ರಂತೆ ಪ್ರಕರಣ ದಾಖಲಾಗಿದೆ.
