IMG-20230719-WA00161.jpg
Spread the love

ಉಡುಪಿ: ದಿನಾಂಕ:13-12-2025 (ಹಾಯ್ ಉಡುಪಿ ನ್ಯೂಸ್) ಕ್ರಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಛೇರಿ ಯ ಮುಂದೆ ಕೆಲವರು ಕಾನೂನು ಬಾಹಿರವಾಗಿ ಧರಣಿ ಕುಳಿತು ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೆ ಪಿ ಸಂದೇಶ್‌ (41) ಎಂಬವರು ಮೂಡನಿಡಂಬೂರು ಗ್ರಾಮದ ಆದಿ ಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ದಿನಾಂಕ 11/12/2025 ರಂದು  ಸಮಿತಿಯ ಆಡಳಿತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಧ್ಯಾಹ್ನ ಹೊತ್ತಿಗೆ ಅರೋಪಿಗಳಾದ 1) ವಿಜಯಕುಮಾರ್‌ ಕೊಡವೂರು, 2) ಸುಭಾಷಿತ್‌ ಕುಮಾರ್‌, 3) ಫಯಾಜ್‌ ಅಹಮ್ಮದ್‌, 4) ಸುಶಾಂತ್‌ ನ್ಯಾರಿ, 5) ಪ್ರಭು ಭೀಮನಗೌಡ, 6)ಲಕ್ಷ್ಮಣ, 7) ಚಂದಪ್ಪ ಎಸ್,‌ 8) ರಾಮನಾಥ ಪೈ, 9) ರಾಘವೇಂದ್ರ, 10) ಸಿದ್ಧನಗೌಡ, 11)ಕೃಷ್ಣಪ್ಪ, 12) ಅಂಬರೀಶ ಮೆಣಸಿನಕಾಯಿ, 13) ಕೆ ಹರೀಶ್‌ ಭಟ್, 14) ಜಗಳೂರಯ್ಯ, 15) ಪಾಪರಾಜ ಜೆ ಮತ್ತು ಇತರರು ಏಕಾಏಕಿ ಸಮಿತಿ ಒಳಗೆ ಪ್ರವೇಶಿಸಿ ಆಡಳಿತ ಕಛೇರಿಯ ಮುಂಬಾಗ ಬಂದಿದ್ದು, ಇದನ್ನು ನೋಡಿದ ಕೆ.ಪಿ ಸಂದೇಶ್ ಅವರು ಕಚೇರಿಯ ಹೊರಗಡೆ ಬಂದಾಗ ಆರೋಪಿತರೆಲ್ಲರೂ ತಡೆದು ಕಾನೂನು ಬಾಹಿರವಾಗಿ ಕಛೇರಿ ಎದುರುಗಡೆ ಧರಣಿ ಕುಳಿತು “ನ್ಯಾಯ ಬೇಕು” “ಸರ್ಕಾರಿ ಜಾಗ ಉಳಿಸೋಣ” ಕೃಷಿಕರಿಗೆ ನ್ಯಾಯ ಸಿಗಲಿ ಹಾಗೂ ಇತರೇ ಫಲಕಗಳನ್ನು ಹಿಡಿದು ಸಮಿತಿಯ ಆಡಳಿತಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಸರ್ಕಾರಿ ಕೆಲಸಕ್ಕೆ ಅಡಚಣೆ ಪಡಿಸಿದ್ದಲ್ಲದೇ ಆರೋಪಿತರುಗಳು ಕೆ.ಪಿ.ಸಂದೇಶ್ ರವರನ್ನು  ಉದ್ದೇಶಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕೆ.ಪಿ ಸಂದೇಶ್ ಅವರು ನೀಡಿದ ದೂರಿನಂತೆ  ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: THE BHARATIYA NYAYA SANHITA (BNS) 2023 ಕಲಂ: 189(2),329(3),126(2),351(2),132,190 ರಂತೆ ಪ್ರಕರಣ ದಾಖಲಾಗಿದೆ.

error: No Copying!