ಬ್ರಹ್ಮಾವರ: ದಿನಾಂಕ :12-12-2025(ಹಾಯ್ ಉಡುಪಿ ನ್ಯೂಸ್) ಕೊಳಲಗಿರಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಜೂಜಾಟ ನಡೆಸುತ್ತಿದ್ದ ಯುವಕನನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಜಯಕುಮಾರ್ ಅವರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಜಯಕುಮಾರ್ ಅವರು ದಿನಾಂಕ:10-12-2025 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ಠಾಣಾ ಸರಹದ್ದಿನ ಉಪ್ಪೂರು ಗ್ರಾಮದ ಕೊಳಲಗಿರಿ ಸಾಂ ಪ್ಲಾವ್ ಫ್ಲವರ್ ಮತ್ತು ಫ್ರುಟ್ಸ್ & ಜ್ಯೂಸ್ ಸೆಂಟರ್ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದ ಸಮಯ ಸ್ಥಳದಲ್ಲಿದ್ದ ಆರೋಪಿ ಬ್ರಹ್ಮಾವರ ಉಪ್ಪೂರು ನಿವಾಸಿ ಅನ್ವಿತ್ (21) ಎಂಬಾತನನ್ನು ಹಿಡಿದು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು 2ನೇ ಆರೋಪಿ ಪೌಲ್ ಡಿಸೋಜಾ ಎಂಬಾತನಿಗೆ ಸಾರ್ವಜನಿಕರಿಂದ ಅದೃಷ್ಟದ ಆಟ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ಹಣದಲ್ಲಿ ಸ್ವಲ್ಪ ಹಣ ಇಟ್ಟುಕೊಂಡು ಉಳಿದ ಹಣವನ್ನು ಒಟ್ಟು ಮಾಡಿ 2ನೇ ಆರೋಪಿ ಪೌಲ್ ಡಿಸೋಜಾ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದಾನೆ .
ಆರೋಪಿ ಅನ್ವಿತ್ ನ ವಶದಲ್ಲಿದ್ದ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ನಗದು ಹಣ ರೂಪಾಯಿ 1790/- ಹಾಗೂ ಮಟ್ಕಾ ನಂಬ್ರಗಳನ್ನು ಬರೆದಿರುವ ಚೀಟಿ-1, ಮಟ್ಕಾ ನಂಬ್ರಗಳನ್ನು ಬರೆಯಲು ಉಪಯೋಗಿಸುವ ಬಾಲ್‌ಪೆನ್-1 ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 112 BNS & 78(I) (III) KP ACT ರಂತೆ ಪ್ರಕರಣ ದಾಖಲಾಗಿದೆ.
