ಅಜೆಕಾರು : ದಿನಾಂಕ:10-12-2025(ಹಾಯ್ ಉಡುಪಿ ನ್ಯೂಸ್) ಕುಕ್ಕುಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಜೆಕಾರು ಪೊಲೀಸ್ ಠಾಣೆಯ ಠಾಣಾ ASI ವಿಜಯ ಮತ್ತು ಸಿಬ್ಬಂದಿಗಳಾದ ರಾಜೇಶ್ ಹಾಗೂ ರೂಪ ರವರು ಭೇಟಿ ನೀಡಿ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮ ನಡೆಸಿದರು.
ಮಕ್ಕಳಿಗೆ ಶಿಕ್ಷಣದ ಮಹತ್ವ, ಮಕ್ಕಳ ಸಹಾಯವಾಣಿ 1098 ರ ಬಗ್ಗೆ, ಕಾನೂನಿನ ಅರಿವು ಮೂಡಿಸಲಾಯಿತು,ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು,ಸೈಬರ್ ಸಹಾಯವಾಣಿ 1930 ರ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಿದರು.
