360_F_1573496808_br2Ni207bik8qgxy767DMuc19KmREWQ8.webp
Spread the love

ಕೋಟ: ದಿನಾಂಕ:03-12-2025(ಹಾಯ್ ಉಡುಪಿ ನ್ಯೂಸ್) ಯಾರೋ ಅಪರಿಚಿತ ಸೈಬರ್ ವಂಚಕರು ತೆಕ್ಕಟ್ಟೆ ಗ್ರಾಮದ ನಿವಾಸಿ ಯೋರ್ವರಿಗೆ ಆನ್ಲೈನ್ ಮೂಲಕ ವಂಚನೆ ನಡೆಸಿರುವ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಕ್ಕಟ್ಟೆ ಗ್ರಾಮದ ಮಾಲಾಡಿ ಮೇಲ್ಮನೆ ನಿವಾಸಿ ರಾಜಾರಾಮ ಶೆಟ್ಟಿ ಎಂಬವರು ಕೋಟ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಂತೆ;ದಿನಾಂಕ 25.11.2025 ರಂದು  ಯಾರೋ ಅಪರಿಚಿತ ಸೈಬರ್‌ ವಂಚಕರು  ರಾಜಾರಾಮ ಶೆಟ್ಟಿ, (ಪ್ರಾಯ 52 ವರ್ಷ) ಅವರ ತೆಕ್ಕಟ್ಟೆಯ ಕೆನರಾ ಬ್ಯಾಂಕ್‌ ಖಾತೆಯಿಂದ ಕ್ರಮವಾಗಿ ರೂ. 50,000/-, 50,000/, 10,000/- ಮತ್ತು ರೂ. 41,000/- ರಂತೆ ಒಟ್ಟು 4 ಬಾರಿ ಒಟ್ಟು ರೂ. 1,51,000/- ಹಣವನ್ನು ರಾಜಾರಾಮ ಶೆಟ್ಟಿ ರವರ ಗಮನಕ್ಕೆ ಬಾರದೇ ಅವರ ಅನುಮತಿ ಇಲ್ಲದೇ ಆನ್‌ ಲೈನ್‌ ಮುಖೇನ ವರ್ಗಾವಣೆ ಮಾಡಿ ರಾಜಾರಾಮ ಶೆಟ್ಟಿ ರವರಿಗೆ ನಷ್ಟ ಹಾಗೂ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜಾರಾಮ ಶೆಟ್ಟಿ ರವರು ನೀಡಿದ ದೂರಿನಂತೆ  ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!