ಉಡುಪಿ: 76 ಬಡಗಬೆಟ್ಟು ಗ್ರಾಮದ ಒಳಕಾಡು,ಶಾರದಾಂಬ ದೇವಾಸ್ಥಾನ ಗೋಪುರದ ಬಳಿ ನಿವಾಸಿ ಶೈಲಾ ವಿಲ್ಹೆಲ್ಮೀನಾ (53)ಎಂಬವರ ಮನೆಗೆ ರಾತ್ರಿ ನುಗ್ಗಿದ ಯಾರೋ ಕಳ್ಳರು ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ
ದಿನಾಂಕ : 29/11/2025 ರಂದು ಶೈಲಾ ವಿಲ್ಹೆಲ್ಮೀನಾರವರ ಗಂಡ ಎಂದಿನಂತೆ ವ್ಯವಹಾರವನ್ನು ಮುಗಿಸಿ ರಾತ್ರಿ11:30 ಗಂಟೆಗೆ ಮನೆಗೆ ಬಂದಿದ್ದು ,ಶೈಲಾ ವಿಲ್ಹೆಲ್ಮೀನಾ ಹಾಗೂ ಅವರ ಗಂಡ ಊಟ ಮಾಡಿ ದಿನಾಂಕ : 30/11/2025 ರಂದು ಸಮಯ 01:00 ಗಂಟೆಯವರೆಗೆ ಟಿವಿನೋಡಿ ಅವರಬೆಡ್ ರೂಂನಲ್ಲಿ ಮಲಗಿಕೊಂಡಿದ್ದು ಮನೆಯಲ್ಲಿ ಅತ್ತೆ ಪ್ರಾಯಸ್ತರಾಗಿರುವುದರಿಂದ ಶೈಲಾ ವಿಲ್ಹೆಲ್ಮೀನಾರವರು ಬೆಡ್ ರೂಂನ್ನುಲಾಕ್ ಮಾಡದೇ ಬಾಗಿಲು ತೆರೆದು ಮಲಗಿರುತ್ತಾರೆ.
ದಿನಾಂಕ:30/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಶೈಲಾ ವಿಲ್ಹೆಲ್ಮೀನಾರವರು ಚರ್ಚಿಗೆ ಹೋಗಲು ಚಿನ್ನ ಧರಿಸಲು ಬೆಡ್ರೂಂ ಕಪಾಟಿನ ಸ್ಲೈಡ್ ಡೋರ್ ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 368 ಗ್ರಾಂ ಚಿನ್ನಾಭರಣಗಳ ಅಂದಾಜುಮೌಲ್ಯ 44,60,000/- ಲಕ್ಷರೂಪಾಯಿ ಹಾಗೂ ಶೈಲಾ ವಿಲ್ಹೆಲ್ಮೀನಾರವರ ಅತ್ತೆಯ ಮೊಬೈಲ್ ಫೋನನ್ನು ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದು, ಶೈಲಾ ವಿಲ್ಹೆಲ್ಮೀನಾರವರ ಮಗಳು ವಿದೇಶದಲ್ಲಿದ್ದು, ಅವರ ಕೆಲವು ಚಿನ್ನಾಭರಣಗಳಮಾಹಿತಿ ಸದ್ಯಕ್ಕೆ ತಿಳಿಯದೇ ಇದ್ದು, ಮುಂದಕ್ಕೆ ವಿಚಾರಿಸಿ ಮಾಹಿತಿ ನೀಡಲಾಗುವುದು ಎಂದು ಶೈಲಾ ವಿಲ್ಹೆಲ್ಮೀನಾರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: (U/s-331(3), 331(4) 305 BNS ರಂತೆ ಪ್ರಕರಣ ದಾಖಲಾಗಿದೆ.
