ಗಂಗೊಳ್ಳಿ: ದಿನಾಂಕ :24/11/2025 (ಹಾಯ್ ಉಡುಪಿ ನ್ಯೂಸ್) ಆಲೂರು ಗ್ರಾಮದ ಮಾವಿನಗುಳಿ ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಅವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ&ಸು)ಪವನ್ ನಾಯಕ್ ಅವರಿಗೆ ದಿನಾಂಕ:23-11-2025 ರಂದು ಆಲೂರು ಗ್ರಾಮದ ಆಲೂರು ಮಾವಿನಗುಳಿ ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಜನರು ಗುಂಪು ಸೇರಿದ್ದು ಇಬ್ಬರು 2 ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಳ (ಕತ್ತಿ) ನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರಿದು ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ್ದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದರು.
ಕೋಳಿ ಅಂಕ ಜುಗಾರಿ ಆಡುತ್ತಿದ್ದಲ್ಲಿಗೆ ದಾಳಿ ಮಾಡಿ 1) ದಿವಾಕರ (56), 2) ಗಣೇಶ್ (40), 3) ಗಣೇಶ್ (29), 4)ಪ್ರಶಾಂತ್ (37),5) ಎಚ್. ಬಾಬು (55) ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು, ಜಯಶೀಲ ಶೆಟ್ಟಿ ಹಾಗೂ ಇತರರು ಸ್ಥಳದಿಂದ ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 7 ,ಕತ್ತಿ – 05 (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದ ನಗದು ಹಣ 2400/- ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಆಪಾದಿತರು ಬಂದ 1)KA-25-L-7198, 2)KA-20-EG-2233, 3)KA-20-EG-8400, 4)KA-51-EJ-2633, 5)KA-19-EV-7731 ನೇ ಪಲ್ಸರ್ ಮೋಟಾರು ಸೈಕಲ್, 6)KA-20-EB-2320, 7) KA-20-HD-2786 ನೇ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೋಳಿಗಳಿಗೆ ಆಹಾರ ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸಿದ್ದಾರೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2025 ಕಲಂ:11(1)(a) ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು 87,93 KP ACT ರಂತೆ ಪ್ರಕರಣ ದಾಖಲಾಗಿದೆ .
