ಹಿರಿಯಡ್ಕ: ದಿನಾಂಕ :23-11-2025 (ಹಾಯ್ ಉಡುಪಿ ನ್ಯೂಸ್) ಮೂರು ಜನ ಯುವಕರ ಗುಂಪೊಂದು ಪೆರ್ಡೂರಿನ ಬಟ್ಟೆ ಅಂಗಡಿಯೊಂದಕ್ಕೆ ನುಗ್ಗಿ ಯಾವುದೋ ಕಾರಣಕ್ಕೆ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹರಿಖಂಡಿಗೆ,ಬೈರಂಪಳ್ಳಿ ಗ್ರಾಮದ ಕುಂಟಾಲಕಟ್ಟೆ ನಿವಾಸಿ ಮನೋಜ್ (ಪ್ರಾಯ22 ವರ್ಷ ) ಎಂಬವರು ಪೆರ್ಡೂರಿ ನಲ್ಲಿ ರೆಡಿಮೇಡ್ ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾರೆ . ಮನೋಜ್ ರವರ ತಾಯಿಯ ಸ್ನೇಹಿತೆ ಸವಿತಾ ಎಂಬವರಿಗೆ ಸುಮಾರು 6 ತಿಂಗಳ ಹಿಂದೆ ಕಾಲು ಮೂಳೆ ಮುರಿತವಾಗಿದ್ದು ,ಈ ಬಗ್ಗೆ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಮನೋಜ್ ರವರ ತಾಯಿ ಸ್ನೇಹಿತೆ ಸವಿತಾ ರವರನ್ನು ಆಸ್ಪತ್ರೆಯಿಂದ ಕಾರಿನಲ್ಲಿ ಕರೆದುಕೊಂಡು ಬಂದು ಅವರ ಮನೆಗೆ ಬಿಟ್ಟಿರುತ್ತಾರೆ .
ಈ ವಿಚಾರದಲ್ಲಿ ಸಾತ್ವಿಕ್ ಮಡಿವಾಳ ಎಂಬವನು ಪೆರ್ಡೂರಿನಲ್ಲಿರುವ ಮನೋಜ್ ರವರ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ನೀನು ಸವಿತಾ ರವರನ್ನು ಯಾಕೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ನನ್ನ ಬಳಿ ದುಡ್ಡು ಇದೆ ನಾನು ನಿನ್ನ ಅಮ್ಮನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿರುತ್ತಾನೆ ಎಂದೂ ನಂತರ ಸಾತ್ವಿಕ್ ಮಡಿವಾಳನು ನಾನು ಸವಿತಾ ರವರ ಮಗಳು ಶ್ರಾವಣಿಯನ್ನು ಲವ್ ಮಾಡುತ್ತಿರುವೆ, ನೀನು ಅವರ ಸುದ್ದಿಗೆ ಹೋಗಬೇಡ ಎಂದು ಹೇಳಿರುತ್ತಾನೆ ,ಆಗ ಮನೋಜ್ ರವರು ಸವಿತಾ ರವರು ನನ್ನ ಅಮ್ಮನ ತರಹ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಬರಲು ಹೋಗಿರುವುದು ಮಾತ್ರವೆಂದು ಸಾತ್ವಿಕ್ ಮಡಿವಾಳನಿಗೆ ತಿಳಿಸಿದ್ದು, ನಂತರ ಮನೋಜ್ ರವರು ಈ ಬಗ್ಗೆ ಶ್ರಾವಣಿ ಮತ್ತು ಸವಿತಾ ರವರಲ್ಲಿ ವಿಚಾರ ತಿಳಿಸಿದಾಗ ಶ್ರಾವಣಿ ರವರು ನನಗೆ ಸಾತ್ವಿಕ್ ಮಡಿವಾಳನ ಮೇಲೆ ಯಾವುದೇ ಲವ್ ಇರುವುದಿಲ್ಲ ಅವನು ದಾರಿಯಲ್ಲಿ ನನಗೆ ಇಷ್ಟವಿಲ್ಲದೇ ಇದ್ದರೂ ಮಾತನಾಡಿಸುವುದು ಮಾಡಿರುತ್ತಾನೆ ಎಂಬುದಾಗಿ ತಿಳಿಸಿದ್ದು, ದಿನಾಂಕ;20/11/2025 ರಂದು ಮನೋಜ್ ರವರು ಪೆರ್ಡೂರಿನಲ್ಲಿರುವ ರೆಡಿಮೇಡ್ ಬಟ್ಟೆ ಅಂಗಡಿಯಲ್ಲಿರುವಾಗ ಸಾತ್ವಿಕ್ ಮಡಿವಾಳ, ಸುದೀಪ್ ಮತ್ತು ಇನ್ನೊಬ್ಬ ವ್ಯಕ್ತಿ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಅಂಗಡಿಗೆ ಬಂದಿರುತ್ತಾರೆ ಆಗ ಮನೋಜ್ ರವರು ಅಂಗಡಿಯಿಂದ ಹೊರಗಡೆ ಹೋಗಲು ಯತ್ನಿಸಿದಾಗ ಅವರನ್ನು ಅಡ್ಡಗಟ್ಟಿ ಸಾತ್ವಿಕ್ ಮಡಿವಾಳ ಅಂಗಿಯ ಕಾಲರ್ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಅವನ ಕೈಯಲ್ಲಿದ್ದ ಖಡ(ಕೈಬಳೆ)ಯಿಂದ ಎದೆಗೆ ಬೆನ್ನಿಗೆ ಗುದ್ದಿರುತ್ತಾನೆ, ಅವನ ಜೊತೆಯಲ್ಲಿದ್ದವರು ಕೆನ್ನೆಗೆ ಹೊಡೆದು ಮನೋಜ್ ರವರನ್ನು ಕೆಳಗೆ ಬೀಳುವಂತೆ ದೂಡಿ ಹಾಕಿರುತ್ತಾರೆ. ನಂತರ ವಾಪಾಸ್ಸು ಹೋಗುವಾಗ ಆ ದಿನ ಹೇಳಿದ್ದು ಅದೇ ಈ ದಿನ ಹೇಳವುದು ಅದೇ ನನ್ನ ಬಳಿ ದುಡ್ಡು ಇದೇ ನಿನ್ನ ಅಮ್ಮನನ್ನು ಕರೆದುಕೊಂಡು ಹೋಗುತ್ತೇನೆ ಏನು ಮಾಡುತ್ತೀಯಾ ಮಾಡಿಕೊ.ಈ ವಿಚಾರದ ಬಗ್ಗೆ ದೂರು ನೀಡಿದರೇ ನಿನ್ನನ್ನು ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಹಾಕಿ ಎಲ್ಲರೂ ಹೋಗಿರುತ್ತಾರೆ ಎಂದು ಮನೋಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 127(2), 115(2), 118.352,351(2) R/W3(5) BNS ರಂತೆ ಪ್ರಕರಣ ದಾಖಲಾಗಿದೆ.
