ಉಡುಪಿ: ದಿನಾಂಕ:20-11-2025(ಹಾಯ್ ಉಡುಪಿ ನ್ಯೂಸ್) ಟೆಲಿಗ್ರಾಂ ಆ್ಯಪ್ ನಲ್ಲಿ ಪರಿಚಯ ಗೊಂಡ ಅಪರಿಚಿತರೊಂದಿಗೆ ಇನ್ವೆಸ್ಟ್ಮೆಂಟ್ ಮಾಡಿದ ವ್ಯಕ್ತಿ ಯೋರ್ವರಿಗೆ ಅಪರಿಚಿತರು 13 ಲಕ್ಷ ರೂಪಾಯಿವರೆಗೆ ವಂಚನೆ ನಡೆಸಿದ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಿವಾಸಿ ಪ್ರವೀಣ್ ಎಂಬವರು ದಿನಾಂಕ 22/10/2025 ರಂದು ತನ್ನ ಮೊಬೈಲ್‌ನಲ್ಲಿ ಟೆಲಿಗ್ರಾಂ ಆಪ್ ನ್ನು ವೀಕ್ಷಿಸುತ್ತಿದ್ದಾಗ Roshnikhandbara ಎಂಬ ಹೆಸರಿನಲ್ಲಿ @Roshnikhandbara ಎಂಬ ಜಾಬ್ ಲಿಂಕ್ ಬಂದಿದ್ದು ಲಿಂಕ್ ನಲ್ಲಿ ಬೇರೆ ಬೇರೆ ಉದ್ಯೋಗದ ಬಗ್ಗೆ ಹಾಗೂ ಇನ್ವೆಸ್ಟ್ಮೆಂಟ್ ಬಗ್ಗೆ ಸಂದೇಶ ಬರುತ್ತಿದ್ದು ಇದರಿಂದ ಪ್ರವೀಣ್ ಅವರು ಉತ್ತೇಜಿತಗೊಂಡು ಲಿಂಕ್ ಒತ್ತಿದ್ದು ಪ್ರವೀಣ್ ಅವರನ್ನು ಯಾರೋ ಅಪರಿಚಿತರು NSE (Nation Stock Exchange) ಎಂಬ ಗ್ರೂಪಿಗೆ ಸೇರಿಸಿರುತ್ತಾರೆ.
ನಂತರ Vishal Kumar ಎಂಬಾತನು ಪ್ರವೀಣ್ ಅವರನ್ನು ಹೋಟೆಲ್ ರೇಟಿಂಗ್ಸ್ ಮತ್ತು ಪ್ರಾಫಿಟ್ ಆನ್ ಇನ್ವೆಸ್ಟ್ಮೆಂಟ್ ಬಗ್ಗೆ ಬೇರೆ ಗ್ರೂಪ್ ಸೇರಿಸಿರುತ್ತಾನೆ. ಮೊದಲಿಗೆ 3 ಟಾಸ್ಕ್ ನೀಡಿದ್ದು ಮುಗಿದ ಬಳಿಕ ಪ್ರವೀಣ್ ಅವರು ಆರೋಪಿತರು ನೀಡಿದ QR Code ಗೆ ರೂಪಾಯಿ 3,900/- ನ್ನು ಇನ್ವೆಸ್ಟ್ಮೆಂಟ್ ಬಗ್ಗೆ ಜಮಾ ಮಾಡಿರುತ್ತಾರೆ. ಈ ಬಗ್ಗೆ ಆರೋಪಿತರು ರೂಪಾಯಿ 8,800/- ಮೊತ್ತವನ್ನು ಪ್ರವೀಣ್ ರವರು ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತಾರೆ. ನಂತರ ಪ್ರವೀಣ್ ರವರು ದಿನಾಂಕ 22/10/2025 ರಿಂದ ದಿನಾಂಕ 29/10/2025ರ ವರೆಗೆ ಆರೋಪಿತರು ತಿಳಿಸಿದಂತೆ ಹಂತ ಹಂತವಾಗಿ ಒಟ್ಟು 12,38,750/- ಹಣವನ್ನು ಆರೋಪಿತರು ನೀಡಿದ QR Code ಗೆ ಸ್ಕಾನ್ ಮಾಡಿ, RTGS ಹಾಗೂ ಕ್ಯಾಶ್ ಡೆಪೋಸಿಟ್ ಮುಖಾಂತರ ಹೂಡಿಕೆ ಮಾಡಿದ್ದು, ಆರೋಪಿಗಳು ಪ್ರವೀಣ್ ರವರು ಈ ವರೆಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೆ ನಂಬಿಸಿ ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್ & ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿದೆ.
