ಕೋಟ: ದಿನಾಂಕ :16-11-2025(ಹಾಉ ಉಡುಪಿ ನ್ಯೂಸ್) ಸೈಬ್ರಕಟ್ಟೆ ಯಲ್ಲಿರುವ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ಸಿಬ್ಬಂದಿಗಳಿಬ್ಬರು ಜೊತೆಯಾಗಿ ಬ್ಯಾಂಕ್ ಗೆಕಕ್ಕ ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಿಯಾರ ಗ್ರಾಮದ ಸೈಬ್ರಕಟ್ಟೆಯಲ್ಲಿರುವ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಕೆ.ಚಂದ್ರಶೇಖರ ಶೆಟ್ಟಿ (58) ಎಂಬವರು ನೀಡಿರುವ ದೂರಿನಂತೆ,ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಶಿರಿಯಾರ, ಸೈಬ್ರಕಟ್ಟೆ, ಯಡ್ತಾಡಿ, ಅಚ್ಲಾಡಿ ಹಾಗೂ ಕಾವಡಿಯಲ್ಲಿ ಶಾಖೆಗಳಿರುತ್ತದೆ ಎನ್ನಲಾಗಿದೆ .
ದಿನಾಂಕ 05/11/2025 ರಂದು ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಆದ 1 ನೇ ಆರೋಪಿ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ 2 ನೇ ಆರೋಪಿ ಹರೀಶ್ ಕುಲಾಲ್ ಗೆ ಸಂಘದ ಬೇರೆ ಶಾಖೆಗೆ ವರ್ಗಾವಣೆಯಾಗಿರುತ್ತದೆ .
ಕಾವಡಿ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡು ಬಂದಿದ್ದ ರಾಮ ರವರು 1 ನೇ ಆರೋಪಿತನಾದ ಸುರೇಶ್ ಭಟ್ ರಿಂದ ಅಧಿಕಾರ ವಹಿಸಿಕೊಳ್ಳುವ ಸಮಯ ಕಾವಡಿ ಶಾಖೆಯಲ್ಲಿ ಸಂಗ್ರಹವಾದ ಸುಮಾರು 1 ಕೋಟಿ 70 ಲಕ್ಷ ಹಣ ವ್ಯತ್ಯಾಸ ಬಂದಿದ್ದರಿಂದ ಕೆ ಚಂದ್ರಶೇಖರ ಶೆಟ್ಟಿ ರವರು ಕಛೇರಿ ಸಿಬ್ಬಂದಿ ಜೊತೆ ತೆರಳಿ ಪರಿಶೀಲಿಸಿದಾಗ 1 ಕೋಟಿ 70 ಲಕ್ಷ ಹಣ ವಂಚಿಸಿರುವುದು ತಿಳಿದುಬಂದಿರುತ್ತದೆ ಅಲ್ಲದೇ 2 ನೇ ಆರೋಪಿ ಹರೀಶ್ ಕುಲಾಲ್ ಈ ಹಿಂದೆ ಕಾವಡಿ ಶಾಖೆಯಲ್ಲಿ ಆತನ ಚಿನ್ನಾಭರಣ ಅಡವಿಟ್ಟು 21 ಲಕ್ಷ ಪಡೆದಿದ್ದು ಅದನ್ನು ಪರಿಶೀಲಿಸಿದಾಗ 2 ನೇ ಆರೋಪಿ ಅಡವಿಟ್ಟ ಚಿನ್ನಾಭರಣ ಇಲ್ಲದೇ ಇದ್ದು 1 ಮತ್ತು 2 ನೇ ಆರೋಪಿತರು ಸಂಘಟಿತವಾಗಿ ಸೇರಿಕೊಂಡು ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಮೋಸ ಮಾಡಿ ವಂಚಿಸುವ ಸಲುವಾಗಿ ದ್ರೋಹ ಮಾಡಿರುವುದರಿಂದ ಆರೋಪಿಗಳ ಮೇಲೆ ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಾರೆ .
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 318(3)(4)112, 3(5) BNS ರಂತೆ ಪ್ರಕರಣ ದಾಖಲಾಗಿದೆ
