unnamed.jpg
Spread the love

ಬ್ರಹ್ಮಾವರ: ದಿನಾಂಕ:13-11-2025 (ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವ ಅನಧಿಕೃತವಾಗಿ ಮರಗಳನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಿಶ್ವನಾಥ ಪೇತ್ರಿ ಎಂಬವರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣ ಬ್ರಹ್ಮಾವರದಲ್ಲಿ ನಡೆದಿದೆ.

ಬ್ರಹ್ಮಾವರ ಚೇರ್ಕಾಡಿ ಗ್ರಾಮದ ನಿವಾಸಿ ವಿಶ್ವನಾಥ ಪೇತ್ರಿ ಎಂಬವರಿಗೆ ದಿನಾಂಕ 04.11.2025 ರಂದು ಬೆಳಿಗ್ಗೆ  ಅವರ ಮೊಬೈಲ್‌ ನಂಬರ್‌ ಗೆ ಆರೋಪಿ ಶಿವ ಎಂಬವನು ಆತನ ಮೊಬೈಲ್‌ ನಂಬರ್‌ ನಿಂದ ಕರೆ ಮಾಡಿ ವಿಶ್ವನಾಥ ಪೇತ್ರಿ ರವರಿಗೆ “ಏಯ್‌ ನೀನು ವಿಶ್ವನಾಥ್‌ ಅಲ್ಲವಾ? ನಾನು ಮರ ಕಡಿದು ಮಾರುವ ಬಗ್ಗೆ ಫಾರೆಸ್ಟ್‌ ಆಫೀಸರ್‌ ಗೆ ಏಕೆ ಹೇಳಿದೆ, ನಿನ್ನನ್ನು ಹೀಗೇ ಬಿಡುವುದಿಲ್ಲಾ, ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಕಲಂ: 351(2), 352 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!