ಶಂಕರನಾರಾಯಣ: ದಿನಾಂಕ: 12-11-2025(ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಕಡೆಯಿಂದ ಶಂಕರನಾರಾಯಣ ಕಡೆಗೆ ವಾಹನದಲ್ಲಿ ಅಕ್ರಮವಾಗಿ ಸರಕಾರದ ಅನ್ನ ಭಾಗ್ಯ ಯೋಜನೆಯನ್ನು ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ಆಹಾರ ನಿರೀಕ್ಷಕರಾದ ಹೆಚ್ ಎಸ್ ಸುರೇಶ (49) ಅವರಿಗೆ ದಿನಾಂಕ 11/11/2025 ರಂದು ಬೆಳಿಗ್ಗೆ ಕಛೇರಿಯಲ್ಲಿರುವಾಗ ವಾಸೀಂ ಅಕ್ರಂ ಎಂಬಾತನು ಆತನ KA-19-D-3296 ನೇ ಓಮಿನಿ ವಾಹನದಲ್ಲಿ ಸರ್ಕಾರದಿಂದ ನೀಡಲಾದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಿದ್ದಾಪುರ ಕಡೆಯಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಶಂಕರನಾರಾಯಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಬಂದ ಸ್ಥಳಕ್ಕೆ ಶಂಕರನಾರಾಯಣ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿ ಗಳೊಂದಿಗೆ ಶಂಕರನಾರಾಯಣ-ಹಾಲಾಡಿ ರಸ್ತೆಯ Essar ಪೆಟ್ರೋಲ್ ಪಂಪ್ ಬಳಿ ಕಾಯುತ್ತಿರುವಾಗ ಓಮಿನಿ ಕಾರು ಬಂದಿದ್ದು ಅದನ್ನು ತಡೆದು ನಿಲ್ಲಿಸಿ ಕಾರನ್ನು ಸುತ್ತುವರಿದು ಚಾಲಕನನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ವಿಚಾರಿಸಿದಾಗ ವಾಸೀಂ ಅಕ್ರಂ (36), ಹಾರಾಡಿ ಗ್ರಾಮ, ಬ್ರಹ್ಮಾವರ ಎಂಬುದಾಗಿ ತಿಳಿಸಿದ್ದು ಓಮಿನಿ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ವಿದ್ಯುತ್ ಚಾಲಿತ ಸ್ಕೇಲ್-1 , ಅಕ್ಕಿ ತುಂಬಿದ ಪಾಲಿಥೀನ್ ಚೀಲಗಳು-12, ಖಾಲಿ ಪಾಲಿಥೀನ್ ಚೀಲಗಳು-3 ಹಾಗೂ ಸರ್ಕಾರದಿಂದ ಅನ್ನಭಾಗ್ಯ ಅಕ್ಕಿ ತುಂಬಿ ಬಾರುವ ಖಾಲಿ ಗೋಣಿ ಚೀಲ-2 ಇದ್ದು, ಪ್ರತಿಯೊಂದು ಅಕ್ಕಿ ಚೀಲವನ್ನು ಪರಿಶೀಲಿಸಿದಾಗ ಒಟ್ಟು 12 ಚೀಲದಲ್ಲಿ ಅಕ್ಕಿ ತುಂಬಿಟ್ಟಿದ್ದು, ಪ್ರತಿಯೊಂದು ಚೀಲವು ತಲಾ 50 ಕೆಜಿ ತೂಕ ಇರುತ್ತದೆ. 12 ಚೀಲದಲ್ಲಿ 10 ಚೀಲ ಕುಚ್ಚಿಗೆ ಅಕ್ಕಿ ಇದ್ದು ತಲಾ 50 ಕೆಜಿಯಂತೆ ಒಟ್ಟು 5 ಕ್ವಿಂಟಾಲ್ ಕುಚ್ಚಿಗೆ ಅಕ್ಕಿ ಇರುತ್ತದೆ. ಉಳಿದ 2 ಚೀಲ ಅಕ್ಕಿಯನ್ನು ಪರಿಶೀಲಿಸಿದಾಗ ಬೆಳ್ತಿಗೆ ಅಕ್ಕಿ ಇದ್ದು ತಲಾ 50 ಕೆಜಿಯಂತೆ ಒಟ್ಟು 1 ಕ್ವಿಂಟಾಲ್ ಅಕ್ಕಿ ಇರುತ್ತದೆ. ಸರ್ಕಾರಿ ಮೌಲ್ಯ ತಲಾ 1 ಕೆಜಿಗೆ 23 ರೂ ರಂತೆ 6 ಕ್ವಿಂಟಾಲ್ ಅಕ್ಕಿಯ ಮೌಲ್ಯ 13,800/- ರೂಪಾಯಿ ಆಗಿರುತ್ತದೆ. KA19D3296 ನೇ ಓಮಿನಿ ಕಾರಿನ ಅಂದಾಜು ಮೌಲ್ಯ 50,000/-, ವಿದ್ಯುತ್ ಚಾಲಿತ ಸ್ಕೇಲ್ ಅಂದಾಜು ಮೌಲ್ಯ 1500/- , ಖಾಲಿ ಪಾಲಿಥೀನ್ ಚೀಲಗಳು-3 ಹಾಗೂ ಸರ್ಕಾರದಿಂದ ಅನ್ನಭಾಗ್ಯ ಅಕ್ಕಿ ತುಂಬಿ ಬಾರುವ ಖಾಲಿ ಗೋಣಿ ಚೀಲ-2 ಆಗಿದ್ದು ಇವುಗಳನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 3, 6, 7 Essential Commodities Act 1955 ರಂತೆ ಪ್ರಕರಣ ದಾಖಲಾಗಿದೆ.
