kannadaprabha_2025-11-10_6gler8s0_ananya-new.jpg
Spread the love

ದಿನಾಂಕ:10-11-2025(ಹಾಯ್ ಉಡುಪಿ ನ್ಯೂಸ್)

ಕನ್ನಡ ಸಂಗೀತ ಲೋಕದ ಮಧುರ ಕಂಠದ ಹಿನ್ನೆಲೆ ಗಾಯಕಿ ಅನನ್ಯ ಭಟ್ ಅವರು ತಿರುಪತಿಯಲ್ಲಿ ಹಸೆ ಮಣೆ ಏರಿದ್ದಾರೆ.

ಸೋಜುಗದ ಸೂಜಿ ಮಲ್ಲಿಗೆ ಹಾಡಿನಿಂದ ಜನಪ್ರಿಯರಾಗಿದ್ದ ಅನನ್ಯ ಭಟ್ ಅವರು, ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ.

ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕ ಮತ್ತು ಪಂಡಿತರಾದ ಪಂಡಿತ್ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಈ ಮದುವೆ ಸಮಾರಂಭ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಅನನ್ಯ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಅನನ್ಯ ಭಟ್ ಮತ್ತು ಮಂಜು ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ಆಳವಾದ ಒಡನಾಟ ಹೊಂದಿದ್ದು ಇದು ಪರಿಪೂರ್ಣ ಜೋಡಿ ಎಂದು ಅವರ ತಾಯಿ ಹೇಳಿದ್ದಾರೆ.

error: No Copying!