ಉಡುಪಿ: ದಿನಾಂಕ:05-11-2025(ಹಾಯ್ ಉಡುಪಿ ನ್ಯೂಸ್) ಯಾರೋ ಅಪರಿಚಿತರು ಸಂಸ್ಥೆಯೊಂದರ ನಕಲಿ ಇಮೇಲ್ ಐಡಿ ಮೂಲಕ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪನಿಯನ್ನು ನಂಬಿಸಿ ಒಂದು ಕೋಟಿ ನಾಲ್ಕು ಲಕ್ಷಕ್ಕೂ ಮಿಕ್ಕಿ ಹಣವನ್ನು ವಂಚಿಸಿದ್ದಾರೆ ಎಂದು ಶ್ರೀ ಶಶಿಧರ್ ಕೋಟ್ಯಾನ್ ಎಂಬವರು ಪೋಲೀಸರಿಗೆ ದೂರು ನೀಡಿದ್ದಾರೆ.
ಮಣಿಪಾಲ ಟೆಕ್ನಾಲಜಿ ಲಿಮಿಟೆಡ್, ಉದಯವಾಣಿ ಕಟ್ಟಡ, ಪ್ರೆಸ್ ಕೌಂಟರ್, ಮಣಿಪಾಲ, ಉಡುಪಿ ಇದರ ಮುಖ್ಯ ಲೆಕ್ಕಪತ್ರ ನಿರ್ವಾಹಕನಾಗಿ ಶ್ರೀ ಶಶಿಧರ ಕೋಟ್ಯಾನ್ ಎಂಬವರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು Equiflex Private Ltd. ಸಂಸ್ಥೆಯೊಂದಿಗೆ ಲೀಜ್ ರೂಪದಲ್ಲಿ ಅವರ ಮಿಷಿನರಿ ವಸ್ತುಗಳನ್ನು ಬಳಸುತ್ತಿದ್ದು, ಆ ಲೀಜ್ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ Equiflex Private Ltd. ಸಂಸ್ಥೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ನಂಬರ್ ಗೆ ಪಾವತಿ ಮಾಡುತ್ತಿದ್ದು ,ಈಗಾಗಲೇ ನಾಲ್ಕು ಪಾವತಿಗಳನ್ನು ಮಾಡಲಾಗಿದ್ದು ಇದೀಗ ಮತ್ತೊಮ್ಮೆ 5ನೇ ಕಂತಿನ ರೂ 1,04,16,229/- ಹಣವನ್ನು ಪಾವತಿ ಮಾಡಬೇಕಾಗಿದ್ದು, ದಿನಾಂಕ: 11/10/2025 ರಂದು kunal.tawde.equiflex.in ಮೂಲಕ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಯ ಇ-ಮೇಲ್ ಐಡಿ [email protected] ಗೆ ಸಂಪರ್ಕ ಮಾಡಿ 15/10/2025 ಕ್ಕೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ತಿಳಿಸಿರುತ್ತಾರೆ ಎನ್ನಲಾಗಿದೆ.
ಆದರೆ ದಿನಾಂಕ: 13/10/2025 ರಂದು ಬೆಳಗ್ಗೆ kunal.tawde.equiflex-in.com ನಿಂದ [email protected] ಗೆ ಇ-ಮೇಲ್‌ನಲ್ಲಿ ನಮ್ಮ ಬ್ಯಾಂಕ್ ಖಾತೆ ಬದಲಾಗಿದೆ ನೀವು ನಮ್ಮ UCO Bank ನ 34200210000533 IFSC CODE: UCBA0002840 ಖಾತೆಗೆ ಬಾಕಿಯಿರುವ ರೂ 1,04,16,229/- ಮೊತ್ತವನ್ನು ಪಾವತಿಸುವಂತೆ ಒಂದು ಮೆಸೇಜ್ ಬಂದಿದ್ದು, ಅದರಂತೆ ದಿನಾಂಕ:15/10/2025 ರಂದು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯು UTR: NEFT/AXISP00730378333 ನಂತೆ NEFT ಮೂಲಕ ರೂ. 1,04,16,229/- ಹಣವನ್ನು UCO Bank ನ ಖಾತೆ ನಂಬ್ರ 34200210000533 ಗೆ ಪಾವತಿ ಮಾಡಿದ್ದಾರೆ ಎನ್ನಲಾಗಿದೆ .
ಆದರೆ ದಿನಾಂಕ: 29/10/2025 ರಂದು Equiflex Private Ltd ಸಂಸ್ಥೆಯವರು ನಮಗೆ ಹಣ ಸ್ವೀಕೃತವಾಗಿರುವುದಿಲ್ಲ ಎಂದು ತಿಳಿಸಿದ್ದು, ಆಗ ಕಂಪೆನಿಗೆ ಮೋಸ ಹೋಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ಯಾರೋ ಅಪರಿಚಿತರು Equiflex Private Ltd. ಕಂಪೆನಿಯ ಹೆಸರಿನಲ್ಲಿ kunal.tawde.equiflex-in.com ಇ-ಮೇಲ್ ಐಡಿ ಮೂಲಕ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯನ್ನು ಸಂಪರ್ಕಿಸಿ Equiflex Private Ltd. ಕಂಪೆನಿಗೆ ಪಾವತಿಸಬೇಕಾಗಿದ್ದ ರೂ 1,04,16,229/- ಹಣವನ್ನು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯಿಂದ ಪಡೆದು ವಂಚಿಸಿರುತ್ತಾರೆ ಎಂದು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಕಂಪೆನಿಯ ಮುಖ್ಯ ಲೆಕ್ಕ ಪತ್ರ ನಿರ್ವಾಹಕ ಶ್ರೀ ಶಶಿಧರ್ ಕೋಟ್ಯಾನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್ & ಕಲಂ: 336(2), 336(3), 340(2) 318(4) BNS ರಂತೆ ಪ್ರಕರಣ ದಾಖಲಾಗಿದೆ.
