ಗಂಗೊಳ್ಳಿ: ದಿನಾಂಕ: 03/11/2025 (ಹಾಯ್ ಉಡುಪಿ ನ್ಯೂಸ್) ತ್ರಾಸಿ ಗ್ರಾಮದ ತ್ರಾಸಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ ವೈ ಅವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐ ಸುನೀಲ್ ಕುಮಾರ್ ಬಿ. ವೈ ರವರಿಗೆ ದಿನಾಂಕ :02-11-2025 ರಂದು ತ್ರಾಸಿ ಗ್ರಾಮದ ಬೀಟ್ ಸಿಬ್ಬಂದಿಯವರು ಕರೆ ಮಾಡಿ ತ್ರಾಸಿ ಗ್ರಾಮದ ತ್ರಾಸಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪುರಂದರ ಎಂಬವನು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಪಿಎಸ್ಐ ಯವರು ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳ ತಲುಪಿ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸಾರ್ವಜನಿಕರನ್ನು ಕರೆದು ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಕೂಗುತ್ತಾ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಾ ಒಂದು ಹಾಳೆಯಲ್ಲಿ ಪೆನ್ನಿನಿಂದ ಬರೆದುಕೊಳ್ಳುತ್ತಾ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ತನ್ನ ಕಿಸೆಯಲ್ಲಿ ಹಾಕಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತನ ಹೆಸರು ಪುರಂದರ ಪ್ರಾಯ:42 ವರ್ಷ ವಾಸ:ಖಾರ್ವಿಕೇರಿ ಹೊಸಾಡು ಗ್ರಾಮ ಎಂದು ತಿಳಿಸಿದ್ದು ಆತ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು 920/- ರೂಪಾಯಿ, ಮಟ್ಕಾ ಚೀಟಿ, ಬಾಲ್ ಪೆನ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ U/s : 78(1)(111) KP ACT ರಂತೆ ಪ್ರಕರಣ ದಾಖಲಾಗಿದೆ.
