IMG_20251101_180559.jpg
Spread the love

ದಿನಾಂಕ:01-11-2025(ಹಾಯ್ ಉಡುಪಿ ನ್ಯೂಸ್)

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಕಛೇರಿಯ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇಂದು ನಡೆಯಿತು.

ದಿನಾಂಕ 01/11/2025 ರ ಶನಿವಾರ ಬೆಳಗ್ಗೆ ಕರವೇ ಉಡುಪಿ ಜಿಲ್ಲಾ ಕಚೇರಿಯಲ್ಲಿ  ಇಂದು 70ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಸರ್ವ ಸದಸ್ಯರು ಸೇರಿ ವಿಜೃಂಭಣೆ ಯಿಂದ ಆಚರಿಸಿದರು .

ಈ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ರವರು ದೀಪ ಬೆಳಗಿಸಿ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಕರವೇ ಜಿಲ್ಲಾ ಕಛೇರಿಯನ್ನು ಉದ್ಘಾಟಿಸಿ ಕನ್ನಡ ರಾಜ್ಯೋತ್ಸವದ ಶುಭನುಡಿಯನ್ನು ಮಾತನಾಡಿ ಎಲ್ಲರಿಗೂ ಶುಭಾಶಯ ಕೋರಿದರು .

ಕಾರ್ಯಕ್ರಮದಲ್ಲಿ ಕರವೇಯ ರಾಜ್ಯ ಸಂಚಾಲಕರಾದ ಸಿ.ಎಮ್ ಪ್ರಸನ್ನ ಕುಮಾರ್ ಶೆಟ್ಟಿ. ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಕರವೇ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

error: No Copying!