ಬ್ರಹ್ಮಾವರ: ದಿನಾಂಕ:29-10-2025(ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆಯ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದಲ್ಲಿ ಗ್ರಾಹಕರೋರ್ವರು ಕಳಪೆ ಗುಣಮಟ್ಟದ ಚಿನ್ನಾಭರಣ ಅಡವಿರಿಸಿ ಬ್ಯಾಂಕ್ ಗೆ ವಂಚನೆ ನಡೆಸಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರೇಖಾ ಕುಮಾರಿ (39) ಎಂಬವರು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ), ಕೊಕ್ಕರ್ಣೆ ಶಾಖೆ ಇದರ ಶಾಖಾ ವ್ಯವಸ್ಥಾಪಕರಾಗಿದ್ದಾರೆ ಎನ್ನಲಾಗಿದ್ದು ದಿನಾಂಕ 24/07/2025 ರಂದು ಆರೋಪಿ ಯಶವಂತ ಕುಮಾರ್ ಎಂಬವನು ಶಾಖೆಗೆ ಬಂದು ಕೆಲವು ಚಿನ್ನಾಭರಣಗಳಾದ 04 ಬಳೆ, 1 ಎಳೆ ಚೈನ್ ಇವುಗಳ ತೂಕ 69.400 ಗ್ರಾಂ ಆಗಿದ್ದು, ಗರಿಷ್ಠ ಸಾಲ ನೀಡಲು ಕೇಳಿಕೊಂಡಿದ್ದು, ಅದರಂತೆ ಸಂಘದ ಅಪ್ರೈಸರ್ ಆದ ಕೆ. ಭಾಸ್ಕರ ಆಚಾರ್ಯ ರವರು ಚಿನ್ನಾಭರಣಗಳನ್ನು ಪರೀಕ್ಷಿಸಿ 5,20,500/- ರೂ ಸಾಲ ನೀಡಬಹುದೆಂದು ದೃಢೀಕರಣ ನೀಡಿದ್ದು, ಅದರ ಆಧಾರದ ಮೇಲೆ 4,60,000/ರೂ ಸಾಲ ನೀಡಿದ್ದು, ಕೆಲವೊಂದು ದಿನಗಳ ಬಳಿಕ ಆರೋಪಿಯು ಅಡವಿರಿಸಿದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅಲ್ಪ ಗುಣಮಟ್ಟದೆಂದು ಅಪ್ರೈಸರ್ ತಿಳಿಸಿದ್ದು, ನಂತರ ಆರೋಪಿಯು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎನ್ನಲಾಗಿದೆ. ಆರೋಪಿಯು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾನೆ ಹಾಗೂ ಆರೋಪಿ ಯಶವಂತ ಕುಮಾರ್ ನೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹವಿದೆ ಎಂದು ದೂರು ನೀಡಿದ್ದಾರೆ.
ಶಾಖಾ ವ್ಯವಸ್ಥಾಪಕರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 316(2)̤,318 R/W 3 (5) BNS ರಂತೆ ಪ್ರಕರಣ ದಾಖಲಾಗಿದೆ.
