ಕಾರ್ಕಳ: ದಿನಾಂಕ:27-10-2025 (ಹಾಯ್ ಉಡುಪಿ ನ್ಯೂಸ್) ಕುಂಟಲಪಾಡಿ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಲ್ಲು ಕೋರೆ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿ ಯನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರು ಬಂಧಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರಿಗೆ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಿನಾಂಕ 23/10/2025 ರಂದು ಸಂಜೆ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಎಂಬಲ್ಲಿನ ಸ.ನಂ 243/1 ರ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ .
ದಾಳಿಯ ಸಮಯ ಆರೋಪಿ ಭೋಜ ಶೆಟ್ಟಿ ಬೈಲೂರು ಎಂಬವನು ಕಲ್ಲು ಕೋರೆ ಪ್ರದೇಶದಲ್ಲಿ ಸುಮಾರು 3,500/- ರೂಪಾಯಿ ಮೌಲ್ಯದ 300 ಸೈಜು ಶಿಲೆ ಕಲ್ಲುಗಳನ್ನು ರಾಶಿ ಹಾಕಿ ಮಾರಾಟಕ್ಕೆ ಸಾಗಾಟ ಮಾಡಲು ಸಂಗ್ರಹ ಮಾಡಿ ಗಣಿಕಾರಿಕೆ ನಡೆಸಿದ್ದು, ಅಲ್ಲದೆ ಗಣಿಗಾರಿಕೆ ಮಾಡಿದ ಸುಮಾರು 150 ಸೈಜು ಕಲ್ಲುಗಳನ್ನು KA-20-A-2168 ನೇ ಲಾರಿಯಲ್ಲಿ ಲೋಡು ಮಾಡಿ ಸಾಗಾಟ ಮಾಡಲು ಪ್ರಯತ್ನಿಸಿದ್ದನು ಎನ್ನಲಾಗಿದೆ.
ಕೃತ್ಯಕ್ಕೆ ಸಂಬಂದಿಸಿದ ಸೈಜು ಕಲ್ಲು, ಲಾರಿ,ಕಬ್ಬಿಣದ ಸುತ್ತೆ, ಕಬ್ಬಿಣದ ಚಮ್ಮಡಿಯನ್ನು ಪೊಲೀಸರು ಸ್ವಾಧೀನಪಡಿಸಿ ಕೊಂಡಿದ್ದು, ಆಪಾದಿತ ಭೋಜ ಶೆಟ್ಟಿ ಯಾವುದೇ ಪರವಾನಿಗೆ ಹೊಂದದೇ ಸ್ವಂತ ಲಾಭಕ್ಕಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿ ಕಳವು ಮಾಡಿ ಅಪರಾಧವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 303(2), 112(1) BNS ರಂತೆ ಪ್ರಕರಣ ದಾಖಲಾಗಿದೆ.
