Spread the love

ಕಾರ್ಕಳ: ದಿನಾಂಕ 27/10/2025 (ಹಾಯ್ ಉಡುಪಿ ನ್ಯೂಸ್)ನೀರೆ ಗ್ರಾಮದ ಬೈಲೂರು ಅರ್ಚನ ಬಾರ್ ನಲ್ಲಿ ಮದ್ಯಸೇವನೆ ಮಾಡಲು ಬಂದ ವ್ಯಕ್ತಿ ಯೋರ್ವ ಬಾರ್ ನಲ್ಲಿ ಗಲಾಟೆ ಮಾಡಿ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಚಂದ್ರಶೇಖರ ಮಾಡ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕು ನೀರೆ ಗ್ರಾಮದ ಬೈಲೂರು ಅರ್ಚನ ಬಾರ್‌ ನಲ್ಲಿ ನೀರೆ ಬೈಲೂರು ನಿವಾಸಿ ಚಂದ್ರಶೇಖರ ಮಾಡ (70)ಅವರು ದಿನಾಂಕ:21-10-2025 ರಂದು ಇರುವಾಗ ಆರೋಪಿ ಗಣೇಶ ಪೂಜಾರಿ ಎಂಬವನು ಮದ್ಯ ಸೇವನೆ ಮಾಡಲು ಬಾರ್‌ ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ ಆತ ಕುಳಿತ ಕ್ಯಾಬಿನ್‌ ನಿಂದ ಎದ್ದು ಬೇರೆ ಗಿರಾಕಿಗಳು ಕುಳಿತ್ತಿದ್ದ ಕ್ಯಾಬಿನ್‌ ಗೆ ಹೋಗಿ ಅಲ್ಲಿ ಕುಳಿತ್ತಿದ್ದ ಗಿರಾಕಿಗಳಿಗೆ ಏರು ದ್ವನಿಯಲ್ಲಿ ಬೈದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಚಂದ್ರಶೇಖರ ಮಾಡರು ಆತ ಇದ್ದಲ್ಲಿಗೆ ಹೋಗಿ ಬೇರೆ ಗಿರಾಕಿಗಳಿಗೆ ಬೈದು ಗಲಾಟೆ ಮಾಡಬೇಡ ಎಂದು ಹೇಳಿದ್ದಕ್ಕೆ, ಆರೋಪಿ ಗಣೇಶ ಪೂಜಾರಿ ಯು ಚಂದ್ರಶೇಖರ ಮಾಡರಿಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಬೈದು ಬಾರ್‌ ನಿಂದ ಹೊರಗೆ ಬಂದು ಆತ ಬಂದಿದ್ದ KA-20-MD-8686 ನೇ ಕಾರಿನಲ್ಲಿ ಕುಳಿತು ಒಮ್ಮೆಲೇ ಕಾರನ್ನು ಚಲಾಯಿಸಿದ್ದರಿಂದ ಕಾರು ಬಾರ್‌ ನ ಜಗಲಿ ಮೇಲೆ ಸಿಕ್ಕಿ ಹಾಕಿಕೊಂಡು ಬಳಿಕ ಆರೋಪಿ ಗಣೇಶ ಪೂಜಾರಿಯು ಚಂದ್ರ ಶೇಖರ ಮಾಡರನ್ನು ದುರುಗುಟ್ಟಿ ನೋಡಿ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಚಂದ್ರಶೇಖರ ಮಾಡರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 352,351 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!