ಕಾರ್ಕಳ: ದಿನಾಂಕ:22-10-2025(ಹಾಯ್ ಉಡುಪಿ ನ್ಯೂಸ್) ನಕಲಿ ಆಭರಣಗಳನ್ನು ಬ್ಯಾಂಕ್ ಒಂದರಲ್ಲಿ ಅಡವಿಟ್ಟು ಬ್ಯಾಂಕ್ ಗೆ ಹನ್ನೊಂದು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಬ್ಯಾಂಕ್ ನ ಶಾಖಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಲಕ್ಷಣ್ ಶೇಟ್ (58) ಎಂಬವರು ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಕಾರ್ಕಳ ಶಾಖೆ ಯಲ್ಲಿ ಪ್ರಭಾರ ಶಾಖಾಧಿಕಾರಿಯಾಗಿದ್ದು 1 ನೇ ಆರೋಪಿ ನಾಗರಾಜ ಎಂಬವನು ದಿನಾಂಕ 25/10/2024 ರಂದು ಸಾಲದ ಸಂಖ್ಯೆ 9509 ರಲ್ಲಿ 1,75,000/- , ದಿನಾಂಕ 17/02/2025 ರಂದು ಸಾಲದ ಸಂಖ್ಯೆ 19276 ರಲ್ಲಿ ರೂಪಾಯಿ 1,00,000/-, ದಿನಾಂಕ 24/04/2025 ರಂದು ಸಾಲದ ಸಂಖ್ಯೆ 9912 ರಲ್ಲಿ 1,80,000/- ,ದಿನಾಂಕ 06/08/2025 ರಂದು ಸಾಲದ ಸಂಖ್ಯೆ 10115 ರಲ್ಲಿ ರೂಪಾಯಿ 71,000/- ಒಟ್ಟು ರೂಪಾಯಿ 5,26,000/- ನ್ನು ಮತ್ತು 2 ನೇ ಆರೋಪಿ ರೇಣುಕಾ ಬಿ ಎಂಬವರ ಹೆಸರಿನಲ್ಲಿ ದಿನಾಂಕ 24/09/2025 ರಂದು ಸಾಲದ ಸಂಖ್ಯೆ 10234 ರಲ್ಲಿ 3,60,000/- ದಿನಾಂಕ 30/09/2025 ರಂದು ಸಾಲದ ಸಂಖ್ಯೆ 10252 ರಲ್ಲಿ 1,00,000/- ಮತ್ತು ಸಾಲದ ಸಂಕ್ಯೆ 10251 ರಲ್ಲಿ 72,000/- ಒಟ್ಟು ಮೊತ್ತ 5,32,000/- ವನ್ನು ಚಿನ್ನಾಭರಣದ ಮೇಲೆ ಸಾಲವನ್ನು ಪಡೆದಿರುತ್ತಾರೆ ಎನ್ನಲಾಗಿದೆ.
ಆಭರಣಗಳು ಚಿನ್ನದ ಆಭರಣವೆಂದು ಬ್ಯಾಂಕಿನ ಸರಾಫರಾದ 3 ನೇ ಆರೋಪಿ ಸತೀಶ್ ಆಚಾರ್ಯ ಎಂಬವರು ದೃಡೀಕರಿಸಿರುತ್ತಾರೆ. ತದನಂತರ ದಿನಾಂಕ 09/10/2025 ರಂದು 2 ನೇ ಆರೋಪಿ ರೇಣುಕಾ ಬಿ ಬ್ಯಾಂಕಿಗೆ ಬಂದು ತನ್ನ ಗಂಡ 1 ನೇ ಆರೋಪಿ ಹಾಗೂ ತಾನು ಎಲ್ಲಾ ಆಭರಣಗಳ ಮರು ಅಡಮಾನ ಮಾಡಿ ಇನ್ನು ಅಧಿಕ ರೂಪಾಯಿ 1 ಲಕ್ಷ ಸಾಲವಾಗಿ ನೀಡಲು ಕೇಳಿಕೊಂಡಾಗ ಶಾಖಾಧಿಕಾರಿ ಲಕ್ಷ್ಮಣ ಶೇಟ್ ಅವರಿಗೆ ಅನುಮಾನ ಬಂದು ಬ್ಯಾಂಕಿನ ಸರಾಫರಾದ ಸತೀಶ್ ಆಚಾರ್ಯರವರಲ್ಲಿ ಸಾಲದ ಸಂಖ್ಯೆ 19276 ರಲ್ಲಿ ಒತ್ತೆ ಇರಿಸಿದ ಚಿನ್ನವನ್ನು ಮರು ಪರೀಶೀಲಸಲು ತಿಳಿಸಿದ್ದು ಆಗ ಅವರು ಸಾಲದ ಸಂಖ್ಯೆ 19276 ರಲ್ಲಿ ಒತ್ತೆ ಇರಿಸಿದ ಆಭರಣದ 2 ಗುಂಡುಗಳನ್ನು ಕರಗಿಸಿ ಭಾರತ್ ಟೆಸ್ಟಿಂಗ್ ಸೆಂಟರ್ ನಲ್ಲಿ ಪರಿಶೀಲಿಸಿದಾಗ ಆಭರಣ ಚಿನ್ನವಲ್ಲವೆಂದು ದೃಡಪಟ್ಟಿರುತ್ತದೆ ಎನ್ನಲಾಗಿದೆ.
ನಂತರ ಬ್ಯಾಂಕಿನ ಎಲ್ಲಾ ಆಭರಣಗಳನ್ನು ಮುಲ್ಕಿ ಶಾಖೆಯ ಸರಾಫರಾದ ಬಾಲಚಂದ್ರ ಆಚಾರ್ಯ ರವರಲ್ಲಿ ಪರಿಶೀಲನೆ ಮಾಡಿದಾಗ 1 ಮತ್ತು 2 ನೇ ಆರೋಪಿತರು ಒತ್ತೆ ಇಟ್ಟ ಆಭರಣಗಳೆಲ್ಲಾ ನಕಲಿ ಚಿನ್ನವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಮೇಲಿನ 3 ಜನ ಆರೋಪಿಗಳು ಸೇರಿಕೊಂಡು ಹಣ ಮಾಡಿಕೊಳ್ಳುವ ದುರುದ್ದೇಶದಿಂದ ನಕಲಿ ಆಭರಣಗಳನ್ನು ಚಿನ್ನವೆಂದು ನಂಬಿಸಿ ಬ್ಯಾಂಕ್ ಗೆ ಮೋಸದಿಂದ ವಂಚನೆಗೈದು ಸಾಲವನ್ನು ಪಡೆದಿರುತ್ತಾರೆ ಆದ್ದರಿಂದ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಖಾಧಿಕಾರಿ ಲಕ್ಷ್ಮಣ ಶೇಟ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
