ದಿನಾಂಕ:21-10-2025(ಹಾಯ್ ಉಡುಪಿ ನ್ಯೂಸ್)
ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆಯವರನ್ನು ವಿರೋಧಿಸುವ ನೆಪದಲ್ಲಿ ಯಡಿಯೂರಪ್ಪನವರಿಗೆ ಶಾಸಕ ಸುನಿಲ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ ಎಂದು ಉಡುಪಿ ಕಾಂಗ್ರೆಸ್ ನಾಯಕರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ .
ಸುನಿಲ್ ಕುಮಾರ್ ಅವರು ಸಚಿವರಾದ ಪ್ರಿಯಾಂಕ ಖರ್ಗೆ ಅವರು ಆರ್ ಎಸ್ ಎಸ್ ನಲ್ಲಿ ಎಷ್ಟು ಜನ ಬಿಜೆಪಿಯ ನಾಯಕರುಗಳ ಮಕ್ಕಳಿದ್ದಾರೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದು .ಇದಕ್ಕೆ ಅವರ ವಿರುದ್ಧ ಹೇಳಿಕೆಯನ್ನು ನೀಡಿ ನಾನು ನನ್ನ ಮಗನನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿಸುತ್ತೇನೆ ಹೊರತು ಶಾಸಕನನ್ನಾಗಿ ರೂಪಿಸುವುದಿಲ್ಲ .ಎಂದು ತಮ್ಮ ಹೇಳಿಕೆಯನ್ನು ನೀಡಿ ಬೇರೆಯವರ ಹಾಗೆ ನಮ್ಮ ಮಕ್ಕಳನ್ನು ಶಾಸಕರನ್ನಾಗಿ ಮಾಡುವುದು ಸಂಸದರನ್ನಾಗಿ ಮಾಡುವುದೂ ಇಲ್ಲ ಎಂದು ಪ್ರಿಯಾಂಕಾ ಖರ್ಗೆ ಅವರಿಗೆ ಉತ್ತರಿಸಿ. ಅದನ್ನು ಯಡಿಯೂರಪ್ಪನವರಿಗೆ ಟಾಂಗ್ ಕೊಟ್ಟ ರೀತಿಯಲ್ಲಿ ಉತ್ತರಿಸಿರುತ್ತಾರೆ .
ಕುಟುಂಬ ರಾಜಕಾರಣದಲ್ಲಿ ಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬದವರು ಇದ್ದಾರೆ ಎಂಬುದನ್ನು ಸುನಿಲ್ ಕುಮಾರ್ ರವರು ಎತ್ತಿ ತೋರಿಸಿ. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಿಕೆಯ ಮುಖಾಂತರ ನೀಡಿರುತ್ತಾರೆ. ಇದು ಬಿಜೆಪಿಯಲ್ಲಿ ಹಾಗೂ ಸಂಘ ಪರಿವಾರದಲ್ಲಿ ಇವರ ಭಿನ್ನಮತ ಇರೋದು ಸಾಬೀತಾಗಿದೆ .ಆದರೂ ಜನಸಾಮಾನ್ಯರನ್ನು ಮೋಸಗೊಳಿಸಲು ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆಯನ್ನು ನೀಡುವ ನಾಟಕವನ್ನು ಮಾಡುತ್ತಿದ್ದಾರೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.
