images-2.jpeg
Spread the love

ಕೋಟ: ದಿನಾಂಕ:21-10-2025 (ಹಾಯ್ ಉಡುಪಿ ನ್ಯೂಸ್) ಸಾಲ ವಾಪಸ್ ನೀಡಿಲ್ಲ ಎಂದು ಸಾಲ ನೀಡಿದ ವ್ಯಕ್ತಿ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೆದೂರು ಗ್ರಾಮದ ನಿವಾಸಿ ಶ್ರೀಮತಿ ಪ್ರಭಾವತಿ ಎಂಬವರ ಗಂಡ ಗೋಪಾಲ ಅವರು ಆರೋಪಿ ಕೃಷ್ಣ ಮೂರ್ತಿ ಎಂಬವನ ಬಳಿ  ಸಾಲ ಮಾಡಿದ್ದು ಅವರಿಗಿದ್ದ ಆರ್ಥಿಕ ಸಮಸ್ಯೆಯಿಂದಾಗಿ ಸಾಲವನ್ನು ಹಿಂದಿರುಗಿಸದೇ ಇದ್ದುದ್ದರಿಂದ ಆರೋಪಿ ಕ್ರಷ್ಣ ಮೂರ್ತಿ ಯು ದಿನಾಂಕ:19.10.2025 ರಂದು ಸಂಜೆ ಶ್ರೀಮತಿ ಪ್ರಭಾವತಿರವರು ಮನೆಯಲ್ಲಿ ಇರುವಾಗ ಸ್ಕೂಟಿಯಲ್ಲಿ ಬಂದು ಏಯ್‌ ನಿನ್ನ ಗಂಡ ಎಲ್ಲಿ ನಾಯಿಗಳು ಎಂದು ಶ್ರೀಮತಿ ಪ್ರಭಾವತಿರವರು ಪರಿಶಿಷ್ಠ ಜಾತಿಯವರೆಂದು ತಿಳಿದು ಸಹ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಸಾಲದ ಹಣ ಬಡ್ಡಿ ಮತ್ತು ಚಕ್ರ ಬಡ್ಡಿ ಸಮೇತ ವಸೂಲಿ ಮಾಡುವುದು ನನಗೆ ಗೊತ್ತಿದೆ, ರೌಡಿಗಳಿಗೆ ಹೇಳಿ ನಿನ್ನ ಗಂಡನ ಕಾಲು ಮುರಿಯುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ   ಕಲಂ: 352,351(2) BNS 2023 ಮತ್ತು ಕಲಂ:3(1)(r) 3(1)(s) sc/st act ರಂತೆ ಪ್ರಕರಣ ದಾಖಲಾಗಿದೆ.   

error: No Copying!