gettyimages-512682596-612x612.jpg
Spread the love

ಉಡುಪಿ: ದಿನಾಂಕ:21-10-2025(ಹಾಯ್ ಉಡುಪಿ ನ್ಯೂಸ್) ಕೊರಂಗ್ರಪಾಡಿ ನಿವಾಸಿ ಯೋರ್ವರಿಂದ ಸಾಲ ಪಡೆದ ವ್ಯಕ್ತಿ ಯೋರ್ವನು ಸಾಲ ಹಿಂತಿರುಗಿಸುವುದಾಗಿ ಕರೆದು ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾನೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಕೊರಂಗ್ರಪಾಡಿ ನಿವಾಸಿ ಪ್ರಜ್ವಲ್ ರಾಜ್ (28), ಎಂಬವರಿಂದ ವಿಜಯ ಪೂಜಾರಿ ಉದ್ಯಾವರ ಎಂಬಾತನು ಹಣವನ್ನು ಸಾಲವಾಗಿ ಪಡೆದುಕೊಂಡು ಹಿಂದಿರುಗಿಸುವುದಾಗಿ ಹೇಳಿರುತ್ತಾನೆ ಎನ್ನಲಾಗಿದೆ.

ಸ್ವಲ್ಪ ದಿನದ ನಂತರ ಪ್ರಜ್ವಲ್ ರಾಜ್ ರವರು ವಿಜಯನ ಬಳಿ ಹಣವನ್ನು ಕೇಳಲು ಹೋದಾಗ ವಿಜಯನು ಹಣವನ್ನು ಕೊಡಲು ನಿರಾಕರಿಸಿರುತ್ತಾನೆ. ದಿನಾಂಕ : 16/10/2025 ರಂದು ರಾತ್ರಿ ವಿಜಯ ಹಾಗೂ ಪ್ರಜ್ವಲ್ ರಾಜ್ ರಿಗೆ ಪರಿಚಯವಿರುವ ಹರೀಶ ಎಂಬಾತನು ಪ್ರಜ್ವಲ್ ರಾಜ್ ರಿಗೆ ಕರೆ ಮಾಡಿ ನೀನು ಬಲೈಪಾದೆ ಬಳಿ ಬಾ , ನಿನ್ನ ಹಣವನ್ನು ವಿಜಯನೊಂದಿಗೆ ಮಾತನಾಡಿ ತೆಗಿಸಿಕೊಡುತ್ತೇನೆ ಎಂದು ಹೇಳಿರುತ್ತಾನೆ ಎನ್ನಲಾಗಿದೆ.

  ಹರೀಶನ ಮೇಲಿನ ವಿಶ್ವಾಸದಿಂದ ಪ್ರಜ್ವಲ್ ರಾಜ್ ರವರು ಹಾಗೂ ಅವರ ಹೆಂಡತಿ ಬಲೈಪಾದೆಗೆ ಹೋಗಿರುತ್ತಾರೆ. ಪ್ರಜ್ವಲ್ ರಾಜ್ ರವರು ವಿಜಯ ಮತ್ತು ಹರೀಶ್‌ ರವರೊಂದಿಗೆ ಮಾತನಾಡಲು ಹೋದಾಗ ಅವರ ಜೊತೆಗೆ ಬಂದಿದ್ದ ಇನ್ನೂ ಇಬ್ಬರು ವ್ಯಕ್ತಿಗಳು ಸೇರಿ ಪ್ರಜ್ವಲ್ ರಾಜ್ ರವರ ಜಾತಿಯನ್ನು ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಪ್ರಜ್ವಲ್ ರಾಜ್ ರನ್ನು ತಳ್ಳಿ  ಆರೋಪಿತ 1)ವಿಜಯ ಪೂಜಾರಿ, 2) ಹರೀಶ ಮತ್ತು ಇತರೇ ಇಬ್ಬರು ವ್ಯಕ್ತಿಗಳು ಸೇರಿ ಕಾಲಿನಿಂದ ಪ್ರಜ್ವಲ್ ರ ಎದೆ ಹಾಗೂ ಬೆನ್ನಿನ ಭಾಗಕ್ಕೆ ತುಳಿದು, ಕೈ ಗಳಿಗೆ ಮತ್ತು ಕಾಲಿಗೆ ಹೊಡೆದು ಗಾಯಗೊಳಿಸಿರುತ್ತಾರೆ ಎನ್ನಲಾಗಿದೆ. ಅದೇ ಸಮಯದಲ್ಲಿ ಪ್ರಜ್ವಲ್ ರಾಜ್ ರವರ ಬಲಭಾಗದ ಕಿವಿಯನ್ನು ಎಳೆದು, ಕಿವಿಯಲ್ಲಿದ್ದ ಒಂದು ಗ್ರಾಂ ಚಿನ್ನದ ಓಲೆಯನ್ನು ಕಿತ್ತುಕೊಂಡು ಹಿಂದಿರುಗಿಸಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ  ಪೊಲೀಸ್‌ ಠಾಣೆಯಲ್ಲಿ ಕಲಂ  SC AND THE ST (PREVENTION OF ATTROCITIES) ACT, 1989 (U/s-3(1)(r),3(1)(s),3(2)(v-a)); THE BHARATIYA NYAYA SANHITA (BNS), 2023 (U/s-115(2),352,304(2),3(5))  ರಂತೆ ಪ್ರಕರಣ ದಾಖಲಾಗಿದೆ.

error: No Copying!