images-2.jpeg
Spread the love

ಪಡುಬಿದ್ರಿ: ದಿನಾಂಕ :17-10-2025(ಹಾಯ್ ಉಡುಪಿ ನ್ಯೂಸ್) ಹೆಜಮಾಡಿ ಗ್ರಾಮದ ಕೊಕ್ರಾಣಿ ಹೊಳೆಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿ ವೇಲು ಈ ಅವರು ಬಂಧಿಸಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿವೇಲು ಈ ಅವರಿಗೆ ದಿನಾಂಕ:15-10-2025 ರಂದು ಹೆಜಮಾಡಿ ಗ್ರಾಮದ ಕೊಕ್ರಾಣಿ ಎಂಬಲ್ಲಿ ಸರಕಾರಿ ಹೊಳೆಯಲ್ಲಿ ಯಾರೋ ಮರಳನ್ನು ಕಳ್ಳತನ ಮಾಡಿ ಟೆಂಪೋಗೆ ತುಂಬಿಸುತ್ತಿರುವುದಾಗಿ ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ ಅಲ್ಲಿ ಮುಲ್ಕಿ ಕಡೆಯಿಂದ ಅವರಾಲು ಮಟ್ಟು ಕಡೆಗೆ ಹಾದು ಹೋಗಿರುವ ಕಾಂಕ್ರೀಟ್‌ ರಸ್ತೆಯ ಪಶ್ಚಿಮ ದಿಕ್ಕಿನ ಹೊಳೆಬದಿಯಲ್ಲಿ ಒಂದು ಟೆಂಪೋವನ್ನು ನಿಲ್ಲಿಸಿಕೊಂಡು ಓರ್ವ ವ್ಯಕ್ತಿಯು ಹೊಳೆಯಿಂದ ಪ್ಲಾಸ್ಟಿಕ್‌ ಬುಟ್ಟಿಗೆ ಮರಳನ್ನು ತುಂಬಿಕೊಂಡು ಟೆಂಪೋಗೆ ಲೋಡ್‌ ಮಾಡುತ್ತಿದ್ದು, ಮರಳನ್ನು ಲೋಡ್‌ ಮಾಡುತ್ತಿದ್ದ ವ್ಯಕ್ತಿಯನ್ನು ಕರೆದು ವಿಚಾರಿಸಿದಾಗ ಆತನು ತನ್ನ ಹೆಸರು  ದಿವಾಕರ (45), ಹೆಜಮಾಡಿ ಗ್ರಾಮ, ಕಾಪು  ಎಂಬುದಾಗಿಯೂ ಮರಳನ್ನು ತೆಗೆಯಲು ಹಾಗೂ ಟೆಂಪೋದಲ್ಲಿ ಸಾಗಾಟ ಮಾಡಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಆತನು ಯಾವುದೇ ಪರವಾನಿಗೆ ಇರುವುದಿಲ್ಲ ತಾನು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಶಾಂಭವಿ ನದಿಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮುಲ್ಕಿ ಪರಿಸರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಲೋಡ್ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಟೆಂಪೋದ ಬಾಡಿಯನ್ನು ಪರಿಶೀಲಿಸಿದಾಗ ಸುಮಾರು 2000 ರೂಪಾಯಿಗಳು ಬೆಲೆಬಾಳುವ ಅರ್ಧ ಯುನಿಟ್‌ನಷ್ಟು ಮರಳು ಟೆಂಪೋದಲ್ಲಿ ಇರುತ್ತದೆ. ಟೆಂಪೋದ ನಂಬ್ರ KA-19-AC-7563ನೇ ಟಾಟಾ ಏಸ್‌ ಮಾದರಿಯ ಟೆಂಪೋ ಆಗಿದ್ದು ಸ್ಥಳದಲ್ಲಿ ಆರೋಪಿತ ದಿವಾಕರನು ಯಾವುದೇ ಪರವಾನಿಗೆ ಇಲ್ಲದೆ ಸರಕಾರಿ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡಲು ಸುಮಾರು ಅರ್ಧ ಯುನಿಟ್‌ ನಷ್ಟು ಮರಳನ್ನು ಟಂಪೋಗೆ ತುಂಬಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ:303(2) ಬಿ.ಎನ್.ಎಸ್‌ & ಕಲಂ: 4(1-A), 21(4) Mines and Minerals Regulation Act 1957 ಮತ್ತು ಕಲಂ: 66 ಜೊತೆಗೆ 192 (ಎ) IMV Act ರಂತೆ ಪ್ರಕರಣ ದಾಖಲಾಗಿದೆ.

error: No Copying!