images-1.jpeg
Spread the love

ಗಂಗೊಳ್ಳಿ: ದಿನಾಂಕ 13/10/2025 (ಹಾಯ್ ಉಡುಪಿ ನ್ಯೂಸ್) ಮುಳ್ಳಿಕಟ್ಟೆ ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಐ ನವೀನ್ ಅವರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನವೀನ್‌ರವರು ದಿನಾಂಕ:11-10-2025 ರಂದು ಠಾಣೆಯಲ್ಲಿರುವಾಗ ಹೊಸಾಡು ಗ್ರಾಮದ ಬೀಟ್‌ ಸಿಬ್ಬಂದಿ ರವರು ಕರೆ ಮಾಡಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಮೀನು ಮಾರ್ಕೇಟ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಶೋಕ ಪೂಜಾರಿ ಎಂಬವನು  ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ನೀಡಿದ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ  ದಾಳಿ ನಡೆಸಿ ಅಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಅಶೋಕ ಪೂಜಾರಿ ಪ್ರಾಯ: 55 ವರ್ಷ  ವಾಸ:ಮಾಚಿಮನೆ, ಕೊಡಪಾಡಿ ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು, ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ಮಟ್ಕಾ ಜುಗಾರಿಗೆ ಆಟಕ್ಕೆ ಬಳಸಿದ 1)ಮಟ್ಕಾ ಚೀಟಿ-1, 2)ಬಾಲ್‌ ಪೆನ್‌-1, 3)ನಗದು ಹಣ 1320/- ರೂ ಅನ್ನು ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಗಂಗೊಳ್ಳಿ  ಪೊಲೀಸ್ ಠಾಣೆಯಲ್ಲಿ   ಕಲಂ: 78(1)(111) ಕೆ.ಪಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿದೆ.

error: No Copying!