10 ವರ್ಷಗಳಿಂದ ಮನೋರೋಗಕ್ಕೆ ತುತ್ತಾಗಿ ಚಿಕಿತ್ಸೆಯನ್ನೇ ಪಡೆಯದ ತಾಯಿ ಮತ್ತು ಮಕ್ಕಳ ರಕ್ಷಣೆ ಮಾಡಿದ ವಿಶು ಶೆಟ್ಟಿ ಅಂಬಲಪಾಡಿ ಅವರು
ಮಂಜೇಶ್ವರದ ದೈಗೊಳಿ ಶ್ರೀ ಸಾಯಿ ನಿಕೇತನ ಸೇವಾ ಆಶ್ರಮಕ್ಕೆ ದಾಖಲು ಮಾಡಿದ್ದಾರೆ.
ಉಡುಪಿ ಸೆ : ಮನೋರೋಗಿ ಮಹಿಳೆ ತನ್ನ ಇಬ್ಬರು ಮಂದಮತಿಯರಾದ ಹೆಣ್ಣು ಮಕ್ಕಳೊಂದಿಗೆ ನಗರದ ದೇವಸ್ಥಾನ, ಪೊಲೀಸ್ ಠಾಣೆ, ನ್ಯಾಯಾಲಯ ಸಿಕ್ಕ ಸಿಕ್ಕಲ್ಲಿ ತಿರುಗಾಡುತ್ತಾ ಸಾರ್ವಜನಿಕರ ವಿರುದ್ಧ ಸುಳ್ಳು ದೂರು ದಾಖಲಿಸುವುದು, ನೆರೆಮನೆಯವರಿಗೆ ನಿರಂತರ ಅವಾಚ್ಯ ಶಬ್ದ ಬಳಸಿ ಬಯ್ಯುವುದರ ಜೊತೆಗೆ ಅನಾಗರಿಕ ಬದುಕು ಸಾಗಿಸುತ್ತಿದ್ದು ವಿಶು ಶೆಟ್ಟಿ ಅಂಬಲಪಾಡಿಯವರು ಸಖಿ ಸೆಂಟರಿನ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಿ ಮಂಜೇಶ್ವರ ದೈಗೋಳಿಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಉಡುಪಿ ಕಟಪಾಡಿ ಅಚ್ಚಡದ ನಿವಾಸಿ ಬ್ರಾಹ್ಮಣ ಮಹಿಳೆ ಶ್ಯಾಮಲ ಪುರಾಣಿಕ್ (65) ಹಾಗೂ ಮಕ್ಕಳಾದ ನಾಗಶ್ರೀ(33) ಜಯಶ್ರೀ(36) ರಕ್ಷಿಸಲ್ಪಟ್ಟವರು. ಹೆಣ್ಣು ಮಕ್ಕಳಿಬ್ಬರು ಮಂದಮತಿ ಯರಾದರೆ, ತಾಯಿ ಮನೋರೋಗಿ. ಕಳೆದ 10 ವರ್ಷಗಳಿಂದ ಈ ತಾಯಿ ಮಕ್ಕಳು ನಾಗರಿಕ ಸಮಾಜದ ಮದ್ಯೆ ಅನಾಗರಿಕ ಬದುಕು ಸಾಗಿಸುತ್ತಿದ್ದು, ಮನೋರೋಗಿ ಮಹಿಳೆಯು ನೆರೆಹೊರೆಯವರಿಗೆ ಬಯ್ಯುವುದು, ದೂರು ದಾಖಲಿಸುವುದು, ಊರು ತಿರುಗುವುದೇ ನಿತ್ಯ ಕಸುಬು.ಇವರಿಂದ ಬೇಸತ್ತ ಬಹಳಷ್ಟು ಜನರು ಸಹಕರಿಸುವಂತೆ ವಿವಿಧ ಜನಪ್ರತಿನಿಧಿಗಳಿಗೆ ಇಲಾಖೆಗೆ ಮೊರೆ ಇಟ್ಟರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರಿನ ಮುಖ್ಯಸ್ಥರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು, ಕೂಡಲೇ ಸ್ಪಂದಿಸಿ ದೈಗೋಳಿಯ ಆಶ್ರಮದ ಮುಖ್ಯಸ್ಥರಾದ ಡಾ| ಉದಯ ಕುಮಾರ್ ದಂಪತಿಯ ಅನುಮತಿ ಪಡೆದು ಖಾಸಗಿ ವಾಹನದ ಮೂಲಕ ಮಂಜೇಶ್ವರಕ್ಕೆ ದಾಖಲಿಸುವ ಮುಖಾಂತರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಮಹಿಳಾ ಪೋಲಿಸ್ ಠಾಣೆಯ HC ಮಲ್ಲಿಕಾ ಸಹಕರಿಸಿದರು.
ಈ ಕುಟುಂಬ ವಾಸಿಸುವ ಮನೆ.. ಕಸದ ರಾಶಿ, ಬಟ್ಟೆಗಳ ರಾಶಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿರುವ ಪಾತ್ರೆಗಳು…. ಮನೋರೋಗಕ್ಕೆ ಚಿಕಿತ್ಸೆ ಇಲ್ಲ… ಕಳೆದ 10 ವರ್ಷಗಳಲ್ಲಿ ಜನ ಪ್ರತಿನಿಧಿ ಗಳಾಗಲಿ, ಸಮಾಜದ ಮುಖ್ಯಸ್ಥರಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸದೇ ಇರುವುದು ದುರಂತ. ಈ ಕುಟುಂಬಕ್ಕೆ ನಾಗರಿಕ ಸಮಾಜದ ಕೊಂಡಿ ಕಳಚಿರುವುದೇ ಈ ರೀತಿಯ ಘೋರ ಪರಿಸ್ಥಿತಿಗೆ ಕಾರಣ. ಸರಿಯಾದ ಆರೈಕೆ ಹಾಗೂ ಚಿಕಿತ್ಸೆಯಿಲ್ಲದೆ ಈ ಕುಟುಂಬ ದುರಂತಕ್ಕೀಡಾಗಿದೆ. ಇಂತಹ ಪರಿಸ್ಥಿತಿಯ ಮಹಿಳೆಯನ್ನು ರಕ್ಷಿಸಬೇಕಾದವರು ಕಂಡೂ ಕಾಣದ ಹಾಗೆ ಇರುವುದು ಕರ್ತವ್ಯ ಕ್ಕೆ ಲೋಪ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಸ್ಪಂದಿಸಿದ ಸಖಿ ಒನ್ ಸ್ಟಾಪ್ ಸೆಂಟರಿನ ಸಿಬ್ಬಂದಿಗಳು ಶ್ಲಾಘನೀಯರು ಎಂದು ವಿಶುಶೆಟ್ಟಿ ಅಂಬಲಪಾಡಿ ಅವರು ತಿಳಿಸಿದ್ದಾರೆ.
