IMG_20251008_001940.jpg
Spread the love

ಬ್ರಹ್ಮಾವರ: ದಿನಾಂಕ 08.10.2025 (ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆ ಗಾಂಧಿ ನಗರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಜಯಕರ ಎ ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಜಯಕರ ಎ. ಅವರು ದಿನಾಂಕ:07-10-2025 ರಂದು ಹಗಲು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ಠಾಣಾ ಸರಹದ್ದಿನ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಗಾಂಧಿನಗರದ ಬಸ್ಸು ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಠಾಣಾ PSI (L&O) ರವರ ಆದೇಶದಂತೆ ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .

ದಾಳಿ ನಡೆಸಿದ ಸ್ಥಳದಲ್ಲಿ 1ನೇ ಆರೋಪಿ ಕುಮಾರ ಹೆಗ್ಡೆ (59) 34 ನೇ ಕುದಿ ಗ್ರಾಮ, ಬ್ರಹ್ಮಾವರ ಎಂಬವನು  ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ಕೂಗಿ ಕರೆದು 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಜನರಿಂದ ಹಣವನ್ನು ಸಂಗ್ರಹಿಸಿ ಚೀಟಿಯಲ್ಲಿ ಬರೆಯುತ್ತಿದ್ದು, ಆತನು ಮಟ್ಕಾ ಜುಗಾರಿ ಆಟಕ್ಕಾಗಿ ಜನರಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದು   ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ  ತಾನು ಸಾರ್ವಜನಿಕರಿಂದ ಅದೃಷ್ಟದ ಆಟ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ಹಣವನ್ನು ಒಟ್ಟು ಮಾಡಿ 2ನೇ ಆರೋಪಿ ಕರ್ಜೆಯ ಸಂತೋಷ್‌ ಶೆಟ್ಟಿ ಎಂಬಾತನಿಗೆ ನೀಡುವುದಾಗಿ ತಿಳಿಸಿದ್ದು ನಂತರ 1ನೇ ಆರೋಪಿಯ ವಶದಲ್ಲಿದ್ದ ಮಟ್ಕಾ ಜುಗಾರಿ ಬಗ್ಗೆ ಸಂಗ್ರಹಿಸಿದ ನಗದು ಹಣ ರೂ. 815/- ಹಾಗೂ ಮಟ್ಕಾ ನಂಬ್ರಗಳನ್ನು ಬರೆದಿರುವ ಚೀಟಿ-1, ಮಟ್ಕಾ ನಂಬ್ರಗಳನ್ನು ಬರೆಯಲು ಉಪಯೋಗಿಸುವ ಹಳದಿ ಬಣ್ಣದ ಬಾಲ್‌ಪೆನ್-1 ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 112 BNS & 78(I) (III) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!