ಕುಂದಾಪುರ: ದಿನಾಂಕ:23-10-2025 (ಹಾಯ್ ಉಡುಪಿ ನ್ಯೂಸ್) ಬೀಜಾಡಿ ಗ್ರಾಮದ ನಿವಾಸಿ ಮಹಿಳೆಯೋರ್ವರಿಗೆ ಪರಿಚಯ ಗೊಂಡ ವ್ಯಕ್ತಿ ಯೋರ್ವನು ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ ಚಿನ್ನ ಹಾಗೂ 4.50 ಲಕ್ಷ ₹ ವಂಚನೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ.
ಕುಂದಾಪುರ ಬೀಜಾಡಿ ಗ್ರಾಮದ ನಿವಾಸಿ ತೆರೆಸಾ ಮೆಂಡೊನ್ಸಾ (60) ಎಂಬವರು ಹರ್ಬಲ್ ಲೈಫ್ ನ್ಯೂಟ್ರಿಶನ್ ಎಂಬ ಕಂಪೆನಿಯ ವಸ್ತುಗಳನ್ನು ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದು, ಈ ಸಮಯದಲ್ಲಿ ತೆರೆಸಾ ಮೆಂಡೊನ್ಸಾ ರವರಿಗೆ ಆರೋಪಿತ ಸಂತೋಷ (50), ಬಿದ್ಕಲಕಟ್ಟೆ ಕುಂದಾಪುರ ಎಂಬವನ ಪರಿಚಯವಾಗಿರುತ್ತದೆ ಎನ್ನಲಾಗಿದೆ.
ಸುಮಾರು 3 ವರ್ಷದ ಹಿಂದೆ ಆರೋಪಿತ ಸಂತೋಷ ನು ತೆರೆಸಾ ಮೆಂಡೊನ್ಸಾ ರ ಬಳಿ ಕೃಷಿ ತೋಟದ ಖರ್ಚಿಗಾಗಿ ಹಣ ನೀಡಿದರೆ ನಿಮಗೆ ಹೆಚ್ಚುವರಿ ಹಣವನ್ನು ಸೇರಿಸಿ ಬೆಳೆದ ಬೆಳೆ ಮಾರಾಟವಾದ ನಂತರ ನಿಮಗೆ ನೀಡುವುದಾಗಿ ಆರೋಪಿತ ಸಂತೋಷ ನು ತೆರೆಸಾ ಮೆಂಡೊನ್ಸಾ ರ ಬಳಿ ಹಣವನ್ನು ಕೇಳಿದ್ದು ತೆರೆಸಾ ಮೆಂಡೊನ್ಸಾ ರು ಆರೋಪಿತ ಸಂತೋಷ ನ ಮಾತು ನಂಬಿ ಆರೋಪಿತ ಸಂತೋಷ ನು ಕೇಳಿದಂತೆ ತಲಾ 5000, 10,000, 50,000, 90,000 ಹೀಗೆ ಒಟ್ಟು 4,50,000/- ರೂಪಾಯಿಯನ್ನು ನೀಡಿರುತ್ತಾರೆ ಎನ್ನಲಾಗಿದೆ.
ಅಲ್ಲದೇ ಆರೋಪಿತ ಸಂತೋಷ ನು ತೆರೆಸಾ ಮೆಂಡೊನ್ಸಾ ರಿಂದ ಚಿನ್ನದ ಚೈನ್ ಅನ್ನು ಕೂಡಾ ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಅಡವಿಟ್ಟು ಅದರಿಂದಲೂ ಕೂಡ ಹಣವನ್ನು ಪಡೆದಿಕೊಂಡಿರುತ್ತಾನೆ. ಸುಮಾರು ಮೂರು ತಿಂಗಳ ಹಿಂದೆ ತೆರೆಸಾ ಮೆಂಡೊನ್ಸಾ ರಿಗೆ ಚಿನ್ನದ ಮೇಲಿನ ಸಾಲದ ಬಡ್ಡಿಯನ್ನು ಕಟ್ಟಲು ಹಣದ ಅಗತ್ಯವಿದ್ದು, ಈ ಸಂದರ್ಭದಲ್ಲಿ ತೆರೆಸಾ ಮೆಂಡೊನ್ಸಾ ರು ಆರೋಪಿತ ಸಂತೋಷ ನಲ್ಲಿ ಸ್ವಲ್ಪ ಹಣವನ್ನಾದರೂ ನೀಡಿ ಎಂದು ಕೇಳಿಕೊಂಡಾಗ. ನಿಮಗೆ ಹಣವನ್ನು ನೀಡಲು ನನ್ನ ಬಳಿ ಹಣವಿಲ್ಲವೆಂದು ಹೇಳಿ ಆರೋಪಿ ಸಂತೋಷ್ ನು ತೆರೆಸಾ ಮೆಂಡೊನ್ಸಾ ರ ಮೊಬೈಲ್ ಸಂಖ್ಯೆಯನ್ನು ಕೂಡ ಬ್ಲಾಕ್ ಮಾಡಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ತೆರೆಸಾ ಮೆಂಡೊನ್ಸಾ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 318(2) ,318(3) , 318(4) BNS ರಂತೆ ಪ್ರಕರಣ ದಾಖಲಾಗಿದೆ.
