IMG_20251005_172720.jpg
Spread the love

ಕುಂದಾಪುರ: ದಿನಾಂಕ:05-10-2025 (ಹಾಯ್ ಉಡುಪಿ ನ್ಯೂಸ್) ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಕಾರನ್ನು  ದುಷ್ಕರ್ಮಿಗಳು ಹಾನಿಯುಂಟು ಮಾಡಿದ್ದಾರೆ ಎಂದು ಶೇಖ್ ಅನ್ಸಾರ್ ಸಾಹೇಬ್ ಎಂಬವರು ಪ್ರಕರಣ ದಾಖಲಿಸಿದ್ದಾರೆ.

ಕುಂದಾಪುರ ಕಾವ್ರಾಡಿ ಗ್ರಾಮದ ನಿವಾಸಿ ಶೇಖ್‌ ಅನ್ಸಾರ್ ಸಾಹೇಬ್‌ (53)ಎಂಬವರ ಅಣ್ಣ ಶೇಖ್‌ ಮೊಹಮ್ಮದ್ ಗೌಸ್‌ ಅವರು ತಮ್ಮ  ಕುಟುಂಬದವರೊಂದಿಗೆ ದಿನಾಂಕ: 01/10/2025 ರಂದು  ಹೈದರಾಬಾದ್‌ ಪ್ರವಾಸದ ಬಗ್ಗೆ ಹೋಗಿದ್ದು, ಅವರು ಪ್ರವಾಸಕ್ಕೆ ಹೋಗುವ ಸುಮಾರು 10 ದಿನಗಳ ಮೊದಲು 5 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ KA-20-AC-7340 ನೇಯ SWIFT ಕಾರನ್ನು ಅವರ ಮನೆಗೆ ತೆಗೆದುಕೊಂಡು ಹೋಗಲು ಇತ್ತೀಚೆಗೆ ದಾರಿಯ ಸಮಸ್ಯೆ ಇದ್ದುದರಿಂದ ಕಾರನ್ನು ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು  ಎನ್ನಲಾಗಿದೆ.

ದಿನಾಂಕ 04/10/2025 ರಂದು ಬೆಳಿಗ್ಗೆ 05:00 ಗಂಟೆಯ ಸಮಯಕ್ಕೆ  ಶೇಖ್ ಅನ್ಸಾರ್ ಸಾಹೇಬ್ ರವರು ಅವರ ಮೂಲ ಮಸೀದಿ ನೂರಾನಿ ಮಸೀದಿಗೆ ನಮಾಜಿಗೆ ಬಂದಿದ್ದಾಗ, ಅಣ್ಣನ ಮಾರುತಿ SWIFT ಕಾರು ನಂಬ್ರ KA-20-AC-7340 ನೇಯದಕ್ಕೆ ದುಷ್ಕರ್ಮಿಗಳು ದಿನಾಂಕ 04/10/2025 ರಂದು ಬೆಳಿಗ್ಗೆ 01:00 ಗಂಟೆಯಿಂದ 03:00 ಗಂಟೆಯ ಮದ್ಯದ ಅವಧಿಯಲ್ಲಿ ಹಾನಿ ಉಂಟು ಮಾಡಿದ್ದು,ಅಣ್ಣ ಶೇಖ್‌ ಮೊಹಮ್ಮದ್ ಗೌಸ್‌ ಮತ್ತು ಅವರ ಮನೆಯವರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶಕ್ಕೆ ಇತ್ತೀಚೆಗೆ ದಾರಿಯ ಸಮಸ್ಯೆ ಉಂಟು ಮಾಡಿದ್ದ ಅಬ್ದುಲ್‌ ಅಜೀಜ್‌‌ ಮತ್ತು ಅವರ ಮಗ ಶೇಖ್ ಅಬ್ದುಲ್ ಫಯಾಜ್‌ ಅಥವಾ ಅಣ್ಣನ ಮಗಳು ನೇಹಾ ಬೇಗಂ ಎಂಬುವವಳೊಂದಿಗೆ ಹಣದ ವ್ಯವಹಾರದಲ್ಲಿ ತಕರಾರು ಮಾಡಿದ್ದ ಕಂಡ್ಲೂರು ಮುಸೀನ್‌ ಹಾಗೂ ಸದಾಕತ್‌ ಎಂಬವರ ಮೇಲೆ ಸಂಶಯವಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 326 (f) BNS ರಂತೆ ಪ್ರಕರಣ ದಾಖಲಾಗಿದೆ ..

error: No Copying!