Sand-mafia-13jun25copy.jpg
Spread the love

ಉಡುಪಿ: ದಿನಾಂಕ:03-10-2025(ಹಾಯ್ ಉಡುಪಿ ನ್ಯೂಸ್)ನಯಂಪಳ್ಳಿ ರೋಬೋ ಸಾಫ್ಟ್ ರಸ್ತೆಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟೆಂಪೋ ವಾಹನವನ್ನು ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಪರಮೇಶ್ವರ ಕೆ ಅವರು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಪರಮೇಶ್ವರ ಕೆ, ಅವರು ದಿನಾಂಕ:02/10/2025 ರಂದು ಮದ್ಯಾಹ್ನ  ಠಾಣೆಯ ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಯಂಪಳ್ಳಿ ರೋಬೋಸಾಫ್ಟ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸಂತೆಕಟ್ಟೆ ಕಡೆಯಿಂದ ಬರುತ್ತಿದ್ದ KA 20 D 8838 ನೋಂದಣಿ 407 ಸಂಖ್ಯೆಯ ಟೆಂಪೋ ವಾಹನವನ್ನು ತಡೆದು ಪರಿಶೀಲಿಸಿದಾಗ  ಅದರಲ್ಲಿ ಅಂದಾಜು 1.5 ಯೂನಿಟ್  ಅಂದಾಜು ಮೌಲ್ಯ 3,500/- ರೂಪಾಯಿ ಮರಳಿದ್ದು, ಆರೋಪಿಯ ಬಳಿ  ಮರಳು ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇದ್ದು,   ಮರಳನ್ನು KA 20 D 8838 ನೋಂದಣಿ 407 ಸಂಖ್ಯೆಯ ಟೆಂಪೋ ವಾಹನದ  ಮಾಲಕ  ಮಣಿಪಾಲದ ಅರುಣ್ ಎಂಬವರ ಸೂಚನೆಯಂತೆ ಉಪ್ಪೂರು ಅಪ್ಪಣ್ಣ ಕುದ್ರುವಿನ ನದಿಯ ತೀರ ಸರಕಾರಿ ಜಾಗದಲ್ಲಿ ರಾಶಿ ಹಾಕಿದ್ದ ಮರಳನ್ನು ಕಳವು ಮಾಡಿಕೊಂಡು ಉಡುಪಿಗೆ ಸಾಗಿಸುತ್ತಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: (U/s-303(2)BNS; (U/s-4(1A),21(4)) MMDR ರಂತೆ ಪ್ರಕರಣ ದಾಖಲಾಗಿದೆ.

error: No Copying!