ಉಡುಪಿ: ದಿನಾಂಕ: 28-09-2025 (ಹಾಯ್ ಉಡುಪಿ ನ್ಯೂಸ್) ಗಂಡ ಮತ್ತು ಗಂಡನ ಮನೆಯವರು ಅತಿಯಾದ ವರದಕ್ಷಿಣೆಯ ಆಸೆಯಿಂದ ತನ್ನನ್ನು ತ್ಯಜಿಸಲು ಮಾನಸಿಕ, ದೈಹಿಕ ಹಿಂಸೆ ನೀಡಿ ತವರು ಮನೆಗೆ ಬಿಟ್ಟು ಹೋಗಿದ್ದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೀಪಕ್ ರಾಜ್ ಹಾಗೂ ಶ್ರೀಮತಿ ಶ್ರೀರಕ್ಷಾ, ಪ್ರಾಯ: 29 ವರ್ಷ, ಗಂಡ: ದೀಪಕ್ ರಾಜ್ ಯು, ವಾಸ: ವಿನಾಯಕ ಪ್ಯಾರಡೈಸ್ ಹತ್ತಿರ, ಸಂತೆಕಟ್ಟೆ ಇವರ ಮದುವೆ ದಿನಾಂಕ :18-12-2022 ರಂದು ಬ್ರಹ್ಮಾವರ ಶಾಮಿಲಿ ಶನಾಯ ಸಭಾಂಗಣದಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದಿದ್ದು ಮದುವೆ ಖರ್ಚನ್ನು ಶ್ರೀಮತಿ ಶ್ರೀರಕ್ಷಾ ಮನೆಯವರು ಭರಿಸಿದ್ದು ಮದುವೆ ಸಮಯ ಶ್ರೀರಕ್ಷಾರಿಗೆ ಹಾಗೂ 1 ನೇ ಆರೋಪಿ ದೀಪಕ್ ರಾಜ್ ನಿಗೆ ಚಿನ್ನ ಹಾಕಿರುತ್ತಾರೆ ಎಂದೂ, ಮದುವೆ ನಂತರ ಆರೋಪಿ ದೀಪಕ್ ರಾಜ್ ಶ್ರೀರಕ್ಷಾರನ್ನು ಸಾಂಸಾರಿಕ ಜೀವನ ನಡೆಸಲು ಆತನ ಮನೆಯಾದ ಕಟಪಾಡಿಗೆ ಕರೆದುಕೊಂಡು ಹೋಗಿರುತ್ತಾರೆ ಎನ್ನಲಾಗಿದೆ.
ಶ್ರೀರಕ್ಷಾರವರ ಮದುವೆಯಾದ 1 ತಿಂಗಳ ವೆರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ನಂತರ ಗಂಡ ದೀಪಕ್ ರಾಜ್ ವೈಯಕ್ತಿಕವಾಗಿ ನಿಂದಿಸುತ್ತಿದ್ದು, ನಿನ್ನೊಂದಿಗೆ ಸಂಸಾರ ನಡೆಸಲು ಆಗಲ್ಲ ನಿನ್ನ ಅಪ್ಪ, ಅಮ್ಮ ಸಾಕಷ್ಟು ವರದಕ್ಷಿಣೆ ನೀಡಿಲ್ಲ ಮದುವೆ ಶ್ರೀಮಂತವಾಗಿ ಮಾಡಿಲ್ಲ ನನಗೆ ಒಳ್ಳೊಳ್ಳೆ ಹುಡುಗಿಯರು ಮದುವೆಯಾಗಲು ಬಯಸಿದ್ದರು ನಿನ್ನನ್ನು ಕಟ್ಟಿಕೊಂಡು ತಪ್ಪು ಮಾಡಿದೆ” ಎಂದು ನಿಂದಿಸುತ್ತಿದ್ದನು. ನಂತರ 2023 ನೇ ಫೆಬ್ರವರಿ ತಿಂಗಳಲ್ಲಿ 1ನೇ ಆರೋಪಿ ಗಂಡ ದೀಪಕ್ ರಾಜ್ ನು ಶ್ರೀರಕ್ಷಾರನ್ನು ಪೂನಾದ ಬಾಡಿಗೆ ಫ್ಲ್ಯಾಟ್ ಗೆ ಕರೆದುಕೊಂಡು ಹೋಗಿ ಅಲ್ಲಿ ವಾಸವಾಗಿದ್ದು , ಆರೋಪಿತರಾದ 1.ದೀಪಕ್ ರಾಜ್, 2.ದೇವರಾಜ್ ಆಚಾರ್ಯ, 3.ಶಾಂತಾ ದೇವರಾಜ್ ಆಚಾರ್ಯ, 4.ಶೀಮತಿ ಜ್ಯೋತಿಪ್ರಭ 5.ಶ್ರೀಮತಿ ಕಾಂತಿಪ್ರಭ 6.ಸಂದೀಪ್ , 7.ಶ್ರೀಮತಿ ಉಮಾಶ್ರೀ ಇವರುಗಳು ಶ್ರೀರಕ್ಷಾ ರವರಿಗೆ ಅವಾಚ್ಯವಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿರುತ್ತಾರೆ ಎನ್ನಲಾಗಿದೆ.
2024 ಫೆಬ್ರವರಿ 10ನೇ ತಾರೀಖಿ ನಂದು ಶ್ರೀರಕ್ಷಾರನ್ನು ಗಂಡ ದೀಪಕ್ ರಾಜ್ ನು ತವರುಮನೆಗೆ ಬಿಟ್ಟು ಹೋಗಿದ್ದು, ಆ ಸಮಯದಲ್ಲಿ ಮೆಸೇಜ್ ಮಾಡಿ ನೀನು ನನಗೆ ಬೇಡಾ ನಿನ್ನ ಮುಖ ನೋಡಲು ಇಷ್ಟವಿಲ್ಲ ನೀವು ಪೂನಾಕ್ಕೆ ಬಂದರೆ ನನ್ನ ಹೆಣ ನೋಡಬೇಕು ಈ ಬಗ್ಗೆ ನೀನು ಎನಾದ್ರೂ ಕಾನೂನು ಕ್ರಮ ಕೈಗೊಂಡರೆ ನಾನು ಹೆದರುವುದಿಲ್ಲ ಎಂದು ಬೆದರಿಕೆಯನ್ನು ಹಾಕಿರುತ್ತಾನೆ ಮತ್ತು ಗಂಡ ದೀಪಕ್ ರಾಜ್ ನು ಫೋನ್ ಕರೆ ಮಾಡಿ ಶ್ರೀರಕ್ಷಾರನ್ನು ಮತ್ತು ಅವರ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ ಎನ್ನಲಾಗಿದೆ. ಹೀಗೆ 1 ರಿಂದ 7ನೇ ಆಪಾದಿತರು ಶ್ರೀರಕ್ಷಾ ರವರಿಗೆ ಮಾನಸಿಕ ಹಿಂಸೆಯನ್ನು ನೀಡಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 352, 351 (2), ಜೊತೆಗೆ 3 (5) BNS ರಂತೆ ಪ್ರಕರಣ ದಾಖಲಾಗಿದೆ.
