ಮಲ್ಪೆ : ದಿನಾಂಕ :27-09-2025(ಹಾಯ್ ಉಡುಪಿ ನ್ಯೂಸ್) ರೌಡಿ ಶೀಟರ್ ಆತ್ರಾಡಿ ಎಕೆಎಮ್ಎಸ್ ಸೈಫುದ್ದೀನ್ ಶನಿವಾರ ಮಲ್ಪೆ ಸಮೀಪದ ಕೊಡವೂರಿನ ಆತನ ಮನೆಯಲ್ಲಿ ತನ್ನ ಸಹಚರರಿಂದಲೇ ಕೊಲೆಗೈಯ್ಯಲ್ಪಟ್ಟಿದ್ದಾನೆ.
ಸೈಫುದ್ದೀನ್ ಮಣಿಪಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ AKMS ಬಸ್ ಸಂಸ್ಥೆಯ ಮಾಲೀಕನಾಗಿದ್ದು ತನ್ನ ಬಸ್ಸಿನ ಚಾಲಕರಾಗಿದ್ದವರಿಂದ ಹತ್ಯೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿಗಳು ಸೈಫುದ್ದೀನ್ ಮೇಲೆ ತಲವಾರು ಹಾಗೂ ಇತರ ಆಯುಧಗಳಿಂದ ದಾಳಿ ನಡೆಸಿದ್ದರು. ಆರೋಪಿಗಳು ಸೈಫುದ್ದೀನ್ ಅವರನ್ನು ಹಿಂಬಾಲಿಸಿ ತಲವಾರು ಗಳಿಂದ ದಾಳಿ ಮಾಡಿದರು ಮತ್ತು ನಂತರ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಅವರು ಘಟನೆಯ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದೆ.

