images-1.jpeg
Spread the love

ಬೈಂದೂರು: ದಿನಾಂಕ: 25-09-2025(ಹಾಯ್ ಉಡುಪಿ ನ್ಯೂಸ್) ಬೈಂದೂರು ನಿವಾಸಿ  ಕುಶಲ ಶೆಟ್ಟಿ  ಎಂಬವರ ತಾಯಿಯ ಹೆಸರಿನಲ್ಲಿದ್ದ 0.29ಎಕ್ರೆ ಸ್ಥಳವನ್ನು ಪೋರ್ಜರಿ ಸಹಿ ಮಾಡುವ ಮೂಲಕ ಗೋವಿಂದ ಪೂಜಾರಿ ಎಂಬವರು ತಮ್ಮ ಹೆಸರಿಗೆ ಮಾಡಿ ಕೊಂಡಿದ್ದಾರೆ ಎಂದು   ಬೈಂದೂರು ಸಿ.ಜೆ. ಮತ್ತು ಜೆಎಂಎಫ್.ಸಿ. ಬೈಂದೂರು ನ್ಯಾಯಾಲಯದಲ್ಲಿ ಕುಶಲ ಶೆಟ್ಟಿ ರವರು ಖಾಸಗಿ ದೂರು ದಾಖಲಿಸಿದ್ದಾರೆ .

ಶಿರೂರು ಗ್ರಾಮದ  ಸ. ನಂಬ್ರ  160/5ಸಿ  ರಲ್ಲಿ 0.29  ಎಕ್ರೆ  ಸ್ಥಳವು ಕುಶಲ ಶೆಟ್ಟಿ ಎಂಬವರ  ಮತ್ತು ಅವರ  ತಾಯಿ ಸುಬ್ಬಕ್ಕ ಶೆಡ್ತಿ  ಮತ್ತು  ಮಕ್ಕಳ ಹೆಸರಿನಲ್ಲಿ  ಜಂಟಿಯಾಗಿದ್ದು ಈ  ಸ್ಥಳವು  ರಸ್ತೆಗೆ  ಹೊಂದಿಕೊಂಡಿದ್ದು ಒಳ್ಳೆಯ  ಮಾರುಕಟ್ಟೆ  ಇರುವ  ಸ್ಥಳವಾಗಿರುತ್ತದೆ ಎನ್ನಲಾಗಿದೆ .

ಈ ಸ್ಥಳವನ್ನು ಗೋವಿಂದ ಬಿಲ್ಲವ ಎನ್ನುವವರು  ಇತರ  ಆರೋಪಿಗಳೊಂದಿಗೆ  ಸೇರಿಕೊಂಡು   ಕುಶಲ ಶೆಟ್ಟಿ ರವರ ಕುಟುಂಬದಲ್ಲಿ  ಮೃತಪಟ್ಟಿರುವವರ  ಹಾಗೂ ಕುಟುಂಬದ  ಇತರ  ಸದಸ್ಯರುಗಳು   ಪೊರ್ಜರಿ  ಸಹಿ ಯ ಮೂಲಕ  ಜಿಪಿಎ ಮಾಡಿಸಿಕೊಂಡು  ಈ  ಜಿಪಿಎ ದಲ್ಲಿ  ರಾಮ ಎನ್ನುವವರನ್ನು ಸೃಷ್ಟಿಸಿಕೊಂಡು    ಪೋರ್ಜರಿ ದಾಖಲೆಗಳನ್ನು ತಯಾರಿಸಿಕೊಂಡು ಕುಶಲ ಶೆಟ್ಟಿ ರವರ ಕುಟುಂಬಕ್ಕೆ ಸೇರಿದ ಸ. ನಂಬ್ರ 160/5ಸಿ  ಯಲ್ಲಿದ್ದ 0.29 ಎಕ್ರೆ ಸ್ಥಳವನ್ನು ದಿನಾಂಕ 20.02.2025 ರಂದು  ಗೋವಿಂದ ಪೂಜಾರಿ  ಹೆಸರಿಗೆ   ಮಾಡಿಕೊಂಡು ಕುಶಲ ಶೆಟ್ಟಿ ರವರಿಗೆ ವಂಚಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ:  318(2), 318(3), 319(2), 337, 341(3), 336(2), 336(3) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!