images.jpeg
Spread the love

ಬ್ರಹ್ಮಾವರ: ದಿನಾಂಕ 23/09/2025 (ಹಾಯ್ ಉಡುಪಿ ನ್ಯೂಸ್)  ಕುದ್ರುಬೆಟ್ಟು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಯೋರ್ವರ ಚಿನ್ನದ ಕರಿಮಣಿ ಸರವನ್ನು ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಎಳೆದು ಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ಬ್ರಹ್ಮಾವರ ಉಪ್ಪೂರು ಗ್ರಾಮದ ನಿವಾಸಿ ರಮಾಬಾಯಿ (57)  ಎಂಬವರು ದಿನಾಂಕ :21-09-2025 ರಂದು ಕುದ್ರುಬೆಟ್ಟು ಮನೆಯಿಂದ ಮೀನು ತರಲು ಉಪ್ಪೂರು ಬಸ್ಸು ನಿಲ್ದಾಣದ ಬಳಿ ಹೋಗಿ ಮೀನು ತೆಗೆದುಕೊಂಡು ವಾಪಾಸು ನಡೆದುಕೊಂಡು ಮನೆಗೆ ಬರುವ ವೇಳೆಗೆ  ಕುದ್ರು ಬೆಟ್ಟು ರಸ್ತೆಯ ಇಂದಿರಾ ಎಂಬವರ ಮನೆಯ ಬಳಿ ಬರುವಾಗ ಎದುರಿನಿಂದ  ಒಂದು ಮೋಟಾರು ಸೈಕಲಿನಲ್ಲಿ ಇಬ್ಬರು ರಮಾಬಾಯಿ ರವರ ಬಳಿ ಬಂದು ಹಿಂದೆ ಕುಳಿತಿದ್ದವನು ರಮಾಬಾಯಿ ರವರ ಕುತ್ತಿಗೆಯಲ್ಲಿದ್ದ ಸುಮಾರು 4.5 ಪವನ್‌ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಸುಲಿಗೆ ಮಾಡಿಕೊಂಡು ಉಪ್ಪೂರು ಕಡೆಗೆ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ:309 (4), 3 (5) ರಂತೆ ಪ್ರಕರಣ ದಾಖಲಾಗಿದೆ.

error: No Copying!