Spread the love

ಕೋಟ: ದಿನಾಂಕ:19-09-2025(ಹಾಯ್ ಉಡುಪಿ ನ್ಯೂಸ್) ಪಡುಕೆರೆ ಪರಿಸರದಲ್ಲಿ ಸರಕಾರದ ಅನ್ನಭಾಗ್ಯದ ಅಕ್ಕಿ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ರಿಕ್ಷಾ ಚಾಲಕನನ್ನು ಕೋಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ವಿ ವಸಂತ್‌ ಕುಮಾರ್‌ (48) ಅವರಿಗೆ ದಿನಾಂಕ 17/09/2025 ರಂದು ಮಣೂರು ಗ್ರಾಮದ ಪಡುಕೆರೆ ಎಂಬಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ KA-20-AA-5329 ನೇ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಂಜೆ  ದಾಳಿ ನಡೆಸಿದ್ದಾರೆ.

ರಿಕ್ಷಾದಲ್ಲಿ ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಡಿತರ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಸಿಗುವ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದು ದೃಢಪಡಿಸಿಕೊಂಡು ರಿಕ್ಷಾದಲ್ಲಿದ್ದ ಒಟ್ಟು 7 ಚೀಲದಲ್ಲಿ ಸಂಗ್ರಹಿಸಿದ್ದ 274.34 Kg ಅಕ್ಕಿ ಸ್ವಾಧೀನಪಡಿಸಿಕೊಂಡು ಆಪಾದಿತ ರಾಜೇಶ್, ಕೋಟತಟ್ಟು ಗ್ರಾಮ ಬ್ರಹ್ಮಾವರ ಹಾಗೂ KA-20-AA-5329 ನೇ ರಿಕ್ಷಾದ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಆಹಾರ ನಿರೀಕ್ಷಕರು ದೂರು ನೀಡಿದ್ದಾರೆ.

ಆಹಾರ ನಿರೀಕ್ಷಕರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 3,5,6(A), 7 Essentialcomodites Act1955 and U/s3(2),18(1) KarnatakaEssentialcommodities ( public distribution system) Public Control Order 2016 ರಂತೆ ಪ್ರಕರಣ ದಾಖಲಾಗಿದೆ.

error: No Copying!