IMG_20250918_132622.jpg
Spread the love

ಕುಂದಾಪುರ: ದಿನಾಂಕ :18/09/2025 (ಹಾಯ್ ಉಡುಪಿ ನ್ಯೂಸ್) ಗುಲ್ವಾಡಿ ಗ್ರಾಮದ ಹುಣ್ಸೆಮನೆ ಎಂಬಲ್ಲಿ ಇಸ್ಪೀಟ್ ಜುಗಾರಿ ನಡೆಯುತ್ತಿದ್ದ ಅಡ್ಡೆ ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಚಂದ್ರಕಲಾ ಪತ್ತಾರ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಚಂದ್ರಕಲಾ ಪತ್ತಾರ ಅವರಿಗೆ ದಿನಾಂಕ :17-09-2025 ರಂದು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣ್ಸೆಮನೆ ಎಂಬಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಸಾರ್ವಜನಿಕ ರಿಂದ ಮಾಹಿತಿ ದೊರೆತಿದ್ದು ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .

ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ 1) ಸಮರ್ಥ (27), ಎನ್.ಆರ್ ನಗರ, ಕಾರ್ಕಳ ಗ್ರಾಮ, 2) ಕಿಶನ್ (45), ತಗ್ಗರ್ಸೆ ಗ್ರಾಮ, ಬೈಂದೂರು ,3) ಪ್ರದೀಪ (42), ಮಂಗಳೂರು, 4) ನಿಸಾರ್ ಶೇಖ್ (42), ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು  ಬಂಧಿಸಿ ಹಿಡಿದುಕೊಂಡಿದ್ದು ಉಳಿದವರು ಹಾಡಿಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ.

ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ 1) ನಗದು ಒಟ್ಟು 11,620/- ರೂಪಾಯಿ, 2) ನೀಲಿ ಬಣ್ಣದ ಪ್ಲಾಸ್ಟಿಕ್‌ -1, 3) ಇಸ್ಪೀಟ್ ಎಲೆಗಳು, 4) ಸ್ಯಾಮ್ ಸಂಗ್ ಎಸ್ 25 ಅಲ್ಟ್ರಾ ಮೊಬೈಲ್‌-01, 5) ವೀವೋ ಮೊಬೈಲ್ ಫೋನ್-01, 6) ರೆಡ್ ಮೀ ಮೊಬೈಲ್ -01, 7) ವೀವೋ ಮೊಬೈಲ್ ಫೋನ್ -01, 8) KA-19-MK-4394 ನೇ ಸ್ಯಾಂಟ್ರೋ ಕಾರು-01, ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!