ಶಂಕರನಾರಾಯಣ: ದಿನಾಂಕ:10-09-2025(ಹಾಯ್ ಉಡುಪಿ ನ್ಯೂಸ್) ಆಮ್ರಕಲ್ಲು ಹಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್ಐ ಐ ಆರ್ ಗಡ್ಡೇಕರ್ ಅವರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ಐ ಆರ್ ಗಡ್ಡೇಕರ್ ಅವರು ದಿನಾಂಕ 10-09-2025 ರಂದು ಠಾಣೆಯಲ್ಲಿರುವಾಗ ಮಾಹಿತಿ ದಾರರೊಬ್ಬರು ಕರೆಮಾಡಿ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಆಮ್ರಕಲ್ಲು ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಆಪಾದಿತ ನಾರಾಯಣ ನಾಯ್ಕ ಎಂಬವ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಹೋದಾಗ ಆಪಾದಿತ ನಾರಾಯಣ ನಾಯ್ಕ ನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ MYSORE LANCER WHISKY ಎಂದು ಬರೆದಿರುವ 70 ಟೆಟ್ರಾ ಪ್ಯಾಕೇಟನ್ನು ಆತನ ವಶ ಇರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು.
ಪಿಎಸ್ಐ ಅವರು ಪೊಲೀಸ್ ಸಿಬ್ಬಂದಿಯವರೊಂದಿಗೆ ಧಾಳಿ ನಡೆಯಿಸಿ 70 ಮದ್ಯದ ಟೆಟ್ರಾ ಪ್ಯಾಕ್, 430/- ರೂ ನಗದು ಹಣ ಹಾಗೂ ಆಪಾದಿತನನ್ನು ವಶಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ 32,34 ಕೆ.ಇ ಕಾಯ್ದೆ-1965 ರಂತೆ ಪ್ರಕರಣ ದಾಖಲಾಗಿದೆ.
