IMG_20250907_215451.jpg
Spread the love

ಅಮಾಸೆಬೈಲು: ದಿನಾಂಕ:07-09-2025(ಹಾಯ್ ಉಡುಪಿ ನ್ಯೂಸ್) ಹುಲಿಕಲ್ ಘಾಟಿ ಕಡೆಯಿಂದ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದ ವಾಹನ ಮತ್ತು ನಾಲ್ವರು ಜಾನುವಾರು ಕಳ್ಳರನ್ನು ಅಮಾಸೆಬೈಲು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆಯ ಸಿಪಿಸಿ 195 ವಿನೋದ್‌ ಬಿ ಬಾಗಣ್ಣನವರ್‌ ರವರು ದಿನಾಂಕ:05-09-2025 ರಂದು ಹೊಸಂಗಡಿ ಗ್ರಾಮದ ಮುತ್ತಿನಕಟ್ಟೆಯ ಬಳಿ ಹೊಸಂಗಡಿ ಚೆಕ್‌ ಪೋಸ್ಟ್‌ ನಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ದಿನಾಂಕ: 06.09.2025 ರಂದು ಬೆಳಿಗ್ಗೆ ಸಮಯ 06:00 ಗಂಟೆಗೆ ಹುಲಿಕಲ್‌ ಘಾಟಿ ಕಡೆಯಿಂದ ಚೆಕ್‌ ಪೊಸ್ಟ್‌ ಕಡೆಗೆ ಬರುತ್ತಿದ್ದ KA-15-7461 ನೇ TATA Intra ವಾಹನವೊಂದು ಬರುತ್ತಿದ್ದು ದನ್ನು ನೋಡಿ ವಾಹನ ನಿಲ್ಲುವಂತೆ ಚಾಲಕನಿಗೆ ಸೂಚನೆ ನೀಡಿದ್ದಾರೆ .

ಪೊಲೀಸರು ವಾಹನವನ್ನು ತಪಾಸಣೆ ಮಾಡಿದಾಗ ಹಿಂದುಗಡೆ ಬಾಡಿಯಲ್ಲಿ ಎರಡು ಕೋಣಗಳಿಗೆ ಯಾವುದೇ ಮೇವು ಅಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ ಈ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ವಧೆಗಾಗಿ ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.

ಎರಡು ಕೋಣಗಳ ಅಂದಾಜು ಮೌಲ್ಯ 30,000/- ಮತ್ತು TATA Intra ವಾಹನದ ಮೌಲ್ಯ 04 ಲಕ್ಷ ರೂಪಾಯಿಗಳಾಗಬಹುದು. ಈ ವಾಹನದಲ್ಲಿ ಇದ್ದ 1, 3 ಮತ್ತು 4ನೇ ಅಪಾದಿತರಿಗೆ ಅವರ ತಪ್ಪಿನ ತಿಳುವಳಿಕೆ ನೀಡಿ  ಜಾನುವಾರು ಅವುಗಳನ್ನು ತಂದ ವಾಹನ ಸಮೇತ ಅಪಾದಿತರುಗಳನ್ನು ಮುಂದಿನ ಕಾನೂನು  ಕ್ರಮಕ್ಕಾಗಿ ಬಂಧಿಸಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ  ಕಲಂ 4̧ ̧5 7̧ 12̧ prevention of Cow Slaughter and Preservation of Cattle Act 2020 & 11(1) ( d) Prevention of Cruelty to animal Act And 66(1)R/W 192 (A) IMV Act ರಂತೆ ಪ್ರಕರಣ ದಾಖಲಾಗಿದೆ.

error: No Copying!