1756041432586.jpg
Spread the love

ಉಡುಪಿ: ದಿನಾಂಕ:01-09-2025(ಹಾಯ್ ಉಡುಪಿ ನ್ಯೂಸ್)

ಶ್ರೀ ಶ್ರೀ ನಾರಾಯಣ ಗುರು ರವರು ಎಲ್ಲಾ ಜಾತಿಯವರಿಗೂ ಗುರುಗಳು ಅವರ ವೃತ್ತವನ್ನೇ ತೆರವುಗೊಳಿಸಿದ್ದಾರೆ ಎಂದರೆ ಇದಕ್ಕೆ ಕಾರಣಕರ್ತರು ಯಾರು ? ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೇ? ರಾಷ್ಟ್ರೀಯ ಹೆದ್ದಾರಿ ಬಗ್ಗೆ ನಗರಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಕಳೆದ ನಗರಸಭೆಯ ಅಧಿವೇಶನದಲ್ಲಿ ಉಡುಪಿಯ ಶಾಸಕರು ಹಾಗೂ ಉಡುಪಿ ನಗರಸಭೆ ಅಧ್ಯಕ್ಷರು ಸಭೆಯಲ್ಲಿ ತಿಳಿಸಿರುತ್ತಾರೆ .ಇದೀಗ ಏಕಾಏಕಿ ನಾರಾಯಣ ಗುರು ವೃತವನ್ನು ತೆಗೆದಿದ್ದಾರೆ ಎಂದಾದರೆ ಇದಕ್ಕೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಉತ್ತರಿಸಬೇಕಾಗಿದೆ. ಈ ಹಿಂದೆಯೂ ಅನಗತ್ಯವಾಗಿ. ಒಬ್ಬ ದೊಡ್ಡ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಈ ರಸ್ತೆಯಲ್ಲಿರುವ ವೃತ್ತ ಅಗಲಗೊಳಿಸಿದ್ದು ಈಗಲೂ ಕಣ್ಣಿಗೆ ಕಾಣುತ್ತಾ ಇದೆ. ಆದುದರಿಂದ ಈ ಬಗ್ಗೆ ಕೂಡಲೇ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಉಡುಪಿ ನಗರಸಭಾ ಸದಸ್ಯರು ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಜಿಲ್ಲಾಡಳಿತವನ್ನು ಒತ್ತಾಯಿಸಿರುತ್ತಾರೆ.

error: No Copying!