- ಗಂಗೊಳ್ಳಿ:ದಿನಾಂಕ:30-08-2025(ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಗ್ರಾಮದ ನಿವಾಸಿ ಮಹಿಳೆಯೋರ್ವರಿಗೆ ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- )ಕುಂದಾಪುರ, ಗಂಗೊಳ್ಳಿ ಗ್ರಾಮದ ನಿವಾಸಿ ಶ್ರೀಮತಿ ದೀಪಿಕಾ (30) ಅವರು ದಿನಾಂಕ:28/04/2016 ರಂದು ಉಡುಪಿಯ ಶ್ಯಾಮಿಲಿ ಸಭಾಗೃಹದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 1 ನೇ ಆರೋಪಿತ ಸಂತೋಷ ನ ಜೊತೆ ವಿವಾಹವಾಗಿ, ತನ್ನ ಗಂಡನ ಮನೆಯಾದ ಬ್ರಹ್ಮಾವರ ತಾಲೂಕು ಸಾಲಿಗ್ರಾಮ, ಪಡುಕೆರೆಯ ಪಾರಂಪಳ್ಳಿ ಎಂಬಲ್ಲಿ ವೈವಾಹಿಕ ಜೀವನ ನಡೆಸಿಕೊಂಡಿದ್ದು, ವಿವಾಹದ ನಂತರ ಆರೋಪಿತ 1) ಸಂತೋಷ 2)ಶ್ರೀಮತಿ ಶೋಭಾ 3)ಶ್ರೀಮತಿ ಸಂಗೀತಾ ಇವರು ದೀಪಿಕಾ ರವರು ತವರಿನಿಂದ ಚಿನ್ನ ಮತ್ತು ಹಣವನ್ನು ವರದಕ್ಷಿಣೆಯಾಗಿ ತಂದಿಲ್ಲವೆಂದು ಮೂದಲಿಸಿ ಮಾನಸಿಕ ಹಿಂಸೆ ನೀಡಿ, ಬೈದು ಅವಮಾನಿಸಿ, ಕೈಯಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352, 351 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
