ಉಡುಪಿ: ದಿನಾಂಕ:30-08-2025(ಹಾಯ್ ಉಡುಪಿ ನ್ಯೂಸ್)
ಉಡುಪಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಯ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸೆಟ್ ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣ ನಡೆಯುತ್ತಿರುವ ಬಗ್ಗೆ ಸುರೇಶ್ ಶೆಟ್ಟಿ ಬನ್ನಂಜೆ ಗುಡುಗಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬನ್ನಂಜೆ ಹಾಗೂ ಶಿರಿ ಬೀಡು ವಾರ್ಡ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಲ್ಲಿ ಸೆಟ್ ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣ ಆಗುತ್ತಿದ್ದು ಈ ಬಗ್ಗೆ ಈ ಹಿಂದೆಯೇ ಆಕ್ಷೇಪಣಾ ಪತ್ರವನ್ನು ನೀಡಿದ್ದರೂ ಇಲ್ಲಿ ನಿರಂತರವಾಗಿ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಅದೇ ರೀತಿಯಲ್ಲಿ ಶಿರಿಬೀಡು ವಾರ್ಡಿನಲ್ಲಿ ಇರುವ ಸಿಟಿ ಬಸ್ ಸ್ಟ್ಯಾಂಡ್ ಮತ್ತು ನರ್ಮ್ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ರಸ್ತೆಯಲ್ಲಿ ದಾರಿ ದೀಪ ಇಲ್ಲದೆ ರಾತ್ರಿಯಲ್ಲಿ ಆ ರಸ್ತೆಯಲ್ಲಿ ಮಂಗಳಮುಖಿಯರು ಕತ್ತಲಲ್ಲಿ ನಿಂತುಕೊಂಡಿರುತ್ತಾರೆ .ಅಲ್ಲಿ ಮಹಿಳೆಯರಿಗೆ ನಡೆದಾಡಲು ಆಗದಂತ ಪರಿಸ್ಥಿತಿ ಇದ್ದು .ಈ ಕೂಡಲೇ ಆ ಪರಿಸರದಲ್ಲಿ ಹೈ ಮಾಸ್ಕ್ ದೀಪವನ್ನು ಅಳವಡಿಸಬೇಕೆಂದು ನಗರ ಸಭೆಯಲ್ಲಿ ಒತ್ತಾಯಿಸಿದರು.
(ಈ ಪರಿಸರದಲ್ಲಿ ರಾತ್ರಿ ಹತ್ತು ಘಂಟೆಯ ನಂತರ ನಡೆಯುತ್ತಿದ್ದ ಅಸಹ್ಯ ಚಟುವಟಿಕೆಗಳ ಬಗ್ಗೆ ಹಾಯ್ ಉಡುಪಿ ಮಾಧ್ಯಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಸತತ ವರದಿ ಪ್ರಕಟಿಸಿತ್ತು .ಈ ಬಗ್ಗೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ ಜನಪರ ನಗರ ಸಭಾ ಸದಸ್ಯ ಸುರೇಶ್ ಶೆಟ್ಟಿ ಯವರಿಗೆ ಸಾರ್ವಜನಿಕರ ವಿಶೇಷ ವಾಗಿ ಮಹಿಳೆಯರ ಪರವಾಗಿ ಅಭಿನಂದನೆಗಳು.)
ಸುರೇಶ್ ಶೆಟ್ಟಿ ಅವರ ಒತ್ತಾಯಕ್ಕೆ ಮಣಿದ ನಗರಸಭಾ ಅಧ್ಯಕ್ಷರು ಕೂಡಲೇ ಅಲ್ಲಿ ದೀಪವನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
