ಮಣಿಪಾಲ: ದಿನಾಂಕ:29-08-2025(ಹಾಯ್ ಉಡುಪಿ ನ್ಯೂಸ್) ಸ್ಪೀಡ್ ಪೋಸ್ಟ್ ಹೆಸರಿನಲ್ಲಿ ಆನ್ಲೈನ್ ನಲ್ಲಿ 1,50,000 ರೂಪಾಯಿ ವಂಚನೆ ನಡೆಸಿದ್ದಾರೆಂದು ನೊಂದ ವ್ಯಕ್ತಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಂದರ (75) ಎಂಬವರು ದಿನಾಂಕ 20/08/2025 ರಂದು ಮುಂಬೈನಲ್ಲಿರುವ ತನ್ನ ಬಾವನಿಗೆ Check Request Slip ನ್ನು ಕಳುಹಿಸಿದ್ದು ದಿನಾಂಕ 26/08/2025 ರವರೆಗೆ ತಲುಪದೇ ಇದ್ದು ಸುಂದರ ಅವರು ದಿನಾಂಕ 26/08/2025 ರಂದು ಆನ್‌ಲೈನ್ ಮುಖಾಂತರ ಸ್ಪೀಡ್ ಪೋಸ್ಟ್ ಆಪೀಸ್ ನಂಬರ್ ಹುಡುಕಿ ಕರೆ ಮಾಡಿದಾಗ ಅವರು ತಿಳಿಸಿದ ನಂಬರ್ ಗೆ ಕರೆ ಮಾಡಿದಾಗ ನಿಮ್ಮ ಪೋಸ್ಟ್ ಮಾಡಲು 5 ರೂಪಾಯಿ ಕಡಿಮೆ ಇದೆ ಇದನ್ನು ನೀವು ಆನ್ಲೈನ್ ಮುಖಾಂತರ ಪಾವತಿಸಬೇಕು ಎಂದು ಹೇಳಿದ್ದು, ಅವರು ಹೇಳಿದಂತೆ ಸುಂದರ ಅವರು ಹಣ ಹಾಕಿದ್ದು ನಂತರ ಸುಂದರರವರಿಗೆ ತಿಳಿಯದಂತೆ ಅವರ ಖಾತೆಯಿಂದ 1,50,000/- ರೂಪಾಯಿ ವರ್ಗಾವಣೆ ಮಾಡಿಕೊಂಡು ನಂಬಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:66(c) 66(d) IT Act & 316(2) BNS ರಂತೆ ಪ್ರಕರಣ ದಾಖಲಾಗಿದೆ.
