ಕುಂದಾಪುರ: ದಿನಾಂಕ:28-08-2025(ಹಾಯ್ ಉಡುಪಿ ನ್ಯೂಸ್) ವರದಕ್ಷಿಣೆ ಹಣವಾಗಿ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಒತ್ತಾಯಿಸಿ ಗಂಡನು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ:04.05.2016 ರಂದು ಜಪ್ತಿ ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಕೃಷ್ಣ ಎಂಬವರ ಮಗನಾದ ರಾಘವೇಂದ್ರ ಕೃಷ್ಣ (43) ಎಂಬವರನ್ನು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಮದುವೆಯ ಸಮಯದಲ್ಲಿ ಕುಂದಾಪುರ ತಾಲೂಕು, ಜಪ್ತಿ ಗ್ರಾಮದ ನಿವಾಸಿ ಸಂಗೀತಾ (32) ಇವರ ತಂದೆ-ತಾಯಿಯವರು ಸಂಗೀತಾರವರಿಗೆ 16 ಪವನ್ ಚಿನ್ನದ ಒಡವೆ ಹಾಕಿದ್ದು, ಸಂಗೀತಾ ರವರ ಗಂಡನಿಗೆ 2½ ಪವನ್ ಚಿನ್ನ ಹಾಕಿರುತ್ತಾರೆ.
ದಿನಾಂಕ:25.12.2020 ರಿಂದ ಸಂಗೀತಾರವರ ಗಂಡ ಸಂಗೀತಾರವರಿಗೆ ತವರು ಮನೆಯಿಂದ ಹಣ ತಂದು ಕೊಡುವಂತೆ ಹಾಗೂ ಮದುವೆ ಸಮಯದಲ್ಲಿ ಸಂಗೀತಾ ರವರ ಮನೆಯವರು ತನಗೆ ವರದಕ್ಷಿಣೆ ನೀಡಿರುವುದಿಲ್ಲ ಈಗ ವರದಕ್ಷಿಣೆ ಹಣ ತಂದು ಕೊಡು ಎಂದು ಪ್ರತಿದಿನ ಹೇಳಿ ಕೆಟ್ಟ ಶಬ್ಧಗಳಿಂದ ಬೈದು ಕೈಯಿಂದ ಹೊಡೆದು ತೊಂದರೆ ನೀಡುತ್ತಿದ್ದು ದಿನಾಂಕ: 06.08.2025 ರಂದು ರಾತ್ರಿ ಸುಮಾರು 12:30 ಗಂಟೆಗೆ ಸಂಗೀತ ರವರ ಗಂಡ ಮಲಗಿದ್ದ ಸಂಗೀತಾ ರವರನ್ನು ಎಬ್ಬಿಸಿ ತನಗೆ ಈಗಲೇ ಸಾಲ ತೆಗೆದುಕೊಡುವಂತೆ ಇಲ್ಲದಿದ್ದರೆ ತವರು ಮನೆಯಿಂದ ತಂದು ಕೊಡುವಂತೆ ಹೇಳಿ ಹೆದರಿಸಿ ಕೈಯಿಂದ ಸಂಗೀತಾರವರ ಮೂಗಿಗೆ ಹೊಡೆದಿದ್ದು ಸಂಗೀತಾ ರವರಿಗೆ ಗಾಯ ಉಂಟಾಗಿ ಗಂಡನ ಹಿಂಸೆ ತಾಳಲಾರದೇ ಜೀವಭಯದಿಂದ ಮಕ್ಕಳನ್ನು ಅಲ್ಲಿಯೇ ಬಿಟ್ಟು ನಡುರಾತ್ರಿಯೇ ತನ್ನ ತವರು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.
ಸಂಗೀತರವರು ಮರುದಿನ ದಿನಾಂಕ:07.8.2025 ರಂದು ಮೂಗಿಗೆ ಆದ ಗಾಯದ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 85, 352, 115 (2),351(2) BNS & 4 DP Act ರಂತೆ ಪ್ರಕರಣ ದಾಖಲಾಗಿದೆ.
