IMG_20250826_174644.jpg
Spread the love

ಕುಂದಾಪುರ: ದಿನಾಂಕ:26-08-2025(ಹಾಯ್ ಉಡುಪಿ ನ್ಯೂಸ್) ತಲ್ಲೂರು ಗ್ರಾಮದ ಕೋಳಿ ತಿನ್ನುವ ಆಹಾರ ಪೂರೈಕೆ ಗಾರರೋರ್ವರಿಗೆ ಬೆಳಗಾವಿಯ ಮಹಿಳೆಯೋರ್ವಳು 4.7ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ,ತಲ್ಲೂರು ಗ್ರಾಮದ ನಿವಾಸಿ ಗಿರೀಶ ಎಸ್‌ (43) ಎಂಬವರು ಶೆಡ್‌ ಗ್ರಿಲ್‌(ಕೋಳಿ ತಿನ್ನುವ ಆಹಾರ) ಪೂರೈಕೆ ಮಾಡುವ ವ್ಯವಹಾರ ಮಾಡಿಕೊಂಡಿದ್ದು. ಆರೋಪಿತಳಾದ ರೋಹಿಣಿ ತನ್ನ ಶ್ರೀ ಶಿವ ಶಕ್ತಿ ಟ್ರೇಡರ್ಸ ಚೆಂಚನಿ,ಚಿಕ್ಕೊಡಿ ತಾಲೂಕು, ಬೆಳಗಾವಿ ಜಿಲ್ಲೆ ಎಂಬಲ್ಲಿಗೆ ತನ್ನ ವ್ಯವಹಾರಕ್ಕೆ ಸಂಬಂದಿಸಿದಂತೆ ಗಿರೀಶ ರಿಂದ ದಿನಾಂಕ 17/01/2025 ರಿಂದ 06/03/2025 ರ ವರೆಗೆ 6,12,000/- ರೂಪಾಯಿಯ ಶೆಡ್‌ ಗ್ರಿಲ್‌(ಕೋಳಿ ತಿನ್ನುವ ಆಹಾರ) ವ್ಯವಹಾರ ಸಾಮಗ್ರಿಗಳನ್ನು ಪಡೆದುಕೊಂಡು ವ್ಯವಹಾರವನ್ನು ಮಾಡಿ 1,50,000/- ರೂಪಾಯಿಗಳನ್ನು ನೀಡಿ ಉಳಿದ 4,62,000/- ರೂಪಾಯಿಗಳನ್ನು ದಿನಾಂಕ 06/03/2025 ರ ಒಳಗಾಗಿ ನೀಡುವುದಾಗಿ ಗಿರೀಶ ರಿಗೆ ನಂಬಿಸಿ ಈ ವರೆಗೆ ಹಣವನ್ನು ವಾಪಾಸು ಕೊಡದೇ ಮೋಸ ಮಾಡಿದ್ದಾರೆ ಎಂದು ಖಾಸಗಿ ದೂರು ದಾಖಲಿಸಿದ್ದಾರೆ.

ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!