Spread the love

ಉಡುಪಿ:ಮಾ:25(ಹಾಯ್ ಉಡುಪಿ ನ್ಯೂಸ್) ವರದಕ್ಷಿಣೆ ಪಡೆದು ಮದುವೆಯಾದ ಪತಿ ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ.

ಮಾರಾಳಿ ನಾಲ್ಕೂರು ನಿವಾಸಿ ನಿವೇದಿತಾ ಶೆಟ್ಟಿ (38) ರವರು ಬೆಂಗಳೂರಿನ ವಿಜಯ ನಗರ ,ಸರಸ್ವತಿ ನಗರದ ಸ್ಟಾಪ್ ನ ಹತ್ತಿರದ 18ನೇ ಕ್ರಾಸ್ ನ “ಸೌರಭ “ದಲ್ಲಿ ವಾಸ ಮಾಡುತ್ತಿರುವ ಕವೀಶ್ ಶೆಟ್ಟಿ (40) ಎಂಬವರನ್ನು ಗುರು ಹಿರಿಯರ ನಿಶ್ಚಯದಂತೆ ಗಂಡಿನ ಮನೆಯವರ ಬೇಡಿಕೆಯಂತೆ 6 ಲಕ್ಷ ವರದಕ್ಷಿಣೆಯನ್ನು ನೀಡಿ ಮದುವೆಯ ಎಲ್ಲಾ ಖರ್ಚನ್ನು ನೋಡಿ ದಿನಾಂಕ 07/12/2008 ರಲ್ಲಿ ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ ನಲ್ಲಿ ವಿವಾಹ ವಾಗಿರುತ್ತದೆ.

ಮದುವೆಯ ನಂತರ ಗಂಡನ ಮನೆಯಾದ ಬೆಂಗಳೂರಿನ ಲ್ಲಿ ವಾಸ ಮಾಡಿಕೊಂಡಿದ್ದು ಮದುವೆಯಾಗಿ ಕೆಲವು ತಿಂಗಳುಗಳ ನಂತರ ಗಂಡನಾದ ಕವೀಶ್ ಶೆಟ್ಟಿಯು ನಿರಂತರವಾಗಿ ನಿವೇದಿತಾರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿದ್ದು ಬೆಲ್ಟಿನಿಂದ ಹೊಡೆದು ದೈಹಿಕ ಹಿಂಸೆಯನ್ನು ನೀಡುತ್ತಿದ್ದ ಕಾರಣ 2018ನೇ ಜೂನ್ ತಿಂಗಳಲ್ಲಿ ತನ್ನ ತಾಯಿ ಮನೆಯಾದ ಉಡುಪಿಯಲ್ಲಿ ಬಂದು ನಿಂತಿದ್ದು ಕವೀಶ್ ಶೆಟ್ಟಿಯು ಅಲ್ಲಿಗೂ ಬಂದು ಕೆಲವು ಪೇಪರ್ ಗಳಿಗೆ ಹಾಗೂ ಚೆಕ್ ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದಾಗ ನಿವೇದಿತಾ ಶೆಟ್ಟಿ ಯವರು ನಿರಾಕರಿಸಿದ್ದು ಆಗ ಕವೀಶ್ ಶೆಟ್ಟಿ ಯು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದಿದ್ದು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿವೇದಿತಾ ಶೆಟ್ಟಿಯವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: No Copying!