ಉಡುಪಿ: ದಿನಾಂಕ :25-08-2025(ಹಾಯ್ ಉಡುಪಿ ನ್ಯೂಸ್) ಬನ್ನಂಜೆಯ ತಾಲೂಕು ಆಫೀಸ್ ರಸ್ತೆಯಲ್ಲಿ ರಾತ್ರಿ ಹೊತ್ತು ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ತನ್ನ ಮಗು ಕಳೆದು ಹೋಗಿದೆ ಎಂದು ಹುಡುಕುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಯುವತಿ ಮೂಲತಃ ಬೆಳಗಾವಿಯವಳಾಗಿದ್ದು ಮಂಜುಳ (27 ವರ್ಷ) ಎಂಬ ಮಾಹಿತಿ ನೀಡಿದ್ದಾಳೆ.
ಯುವತಿ ನೀಡಿದ ದೂರವಾಣಿ ಸಂಖ್ಯೆಯ ಮೂಲಕ ಅವಳ ಪತಿಯ ಮನೆಯವರನ್ನು ಸಂಪರ್ಕಿಸಿದಾಗ ಅವರು ಸರಿಯಾದ ಸ್ಪಂದನೆ ನೀಡಲಿಲ್ಲ . ಯುವತಿ ಮಾನಸಿಕ ಅಸ್ವಸ್ಥತೆಯಾಗಿ ತನ್ನ ಮಗು ಕಳೆದು ಹೋಗಿದೆ ಎಂದು ಕೂಗುತ್ತ ದುಃಖಿಸುತ್ತಿದ್ದಳು. ಯುವತಿ ಮನೋರೋಗಿಯಾಗಿ ಬೆಳಗಾವಿಯಿಂದ ಉಡುಪಿಗೆ ಬಂದಿರುವ ಬಗ್ಗೆ ಮೇಲ್ನೋಟಕ್ಕೆ ತೋರುತ್ತಿದೆ. ಮಗು ಕಳೆದು ಹೋಗಿದೆ ಎಂದು ಬೊಬ್ಬಿಡುತ್ತ ಇರುತ್ತಾಳೆ. ಯುವತಿಯ ಬಗ್ಗೆ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ಮಹಿಳಾ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ವಿಶು ಶೆಟ್ಟಿ ಅಂಬಲಪಾಡಿ ಅವರು ತಿಳಿಸಿದ್ದಾರೆ.

