- ಬೈಂದೂರು: ದಿನಾಂಕ:24-08-2025(ಹಾಯ್ ಉಡುಪಿ ನ್ಯೂಸ್) ಗಂಗನಾಡು ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವಿಯ ಕೊರಳಿನಲ್ಲಿದ್ದ ಚಿನ್ನದ ಸರ ಕಳ್ಳತನ ವಾಗಿದೆ ಎಂದು ಪ್ರಕರಣ ದಾಖಲಾಗಿದೆ.
- ದಿನಾಂಕ 22/08/2025 ರಂದು ಬೈಂದೂರು ಗಂಗನಾಡು ಮಹಿಷ ಮರ್ದಿನಿ ದೇವಸ್ಥಾನ ವನಕೊಡ್ಲು ದೇವಸ್ಥಾನದ ಹೊರ ಸುತ್ತಿನಲ್ಲಿರುವ ಮಹಿಷ ಮರ್ದಿನಿ ದೇವಿಯ ಗುಡಿಯಲ್ಲಿ ದೇವಿಯ ಕೊರಳಿನಲ್ಲಿದ್ದ ಸುಮಾರು 2 ಪವನ್ ತೂಕದ ಚಿನ್ನದ 2 ಚಿನ್ನದ ತಾಳಿ ಇರುವ ಚಿನ್ನದ ಕರಿಮಣಿ ಸರವು ಕಳವಾಗಿರುವುದು ದಿನಾಂಕ 23/08/2025 ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕರು ಪೂಜೆಗೆ ಹೋದಾಗ ತಿಳಿದು ಬಂದಿದ್ದು ಈ ದೇವಸ್ಥಾನಕ್ಕೆ ದಿನಾಂಕ 22/08/2025 ರಂದು ಮದ್ಯಾಹ್ನದ ಅವಧಿಯಲ್ಲಿ ಭಕ್ತಾದಿಯಾಗಿ ಬಂದ 30 ವರ್ಷದ ಗಂಡಸು ಮತ್ತು 40 ವರ್ಷದೊಳಗಿನ ಮಹಿಳೆ ಯ ಮೇಲೆ ಸಂಶಯವಿರುವುದಾಗಿ ಬೈಂದೂರು ,ಗಂಗನಾಡು ಗ್ರಾಮದ ಕುಮಾರ (41) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 331 (3) 305 BNS ರಂತೆ ಪ್ರಕರಣ ದಾಖಲಾಗಿದೆ.
