IMG-20250824-WA0013.jpg
Spread the love

ಉಡುಪಿ: ದಿನಾಂಕ:24-08-2025 (ಹಾಯ್ ಉಡುಪಿ ನ್ಯೂಸ್): ಹೆಬ್ರಿ ಠಾಣಾ ವ್ಯಾಪ್ತಿಯ ನಾಲ್ಕೂರಿನಲ್ಲಿ ಬಂಧನದಲ್ಲಿದ್ದ ಮಾನಸಿಕ ಮಹಿಳೆಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ 40 ದಿನಗಳ ಚಿಕಿತ್ಸೆಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ನೀಡಿ ಹೆತ್ತವರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಮಹಿಳೆ ಬೇಬಿ (36ವರ್ಷ) ಕಳೆದ ಎರಡು ವರುಷಗಳಿಂದ ಮನೆಯ ಹೊರಗಡೆಯ ಸೌಕರ್ಯವಿಲ್ಲದ ಕೊಠಡಿಯಲ್ಲಿ ಚಿಕಿತ್ಸೆ ಇಲ್ಲದೆ ಬಂಧಿಯಾಗಿರುವ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿ ಇಲಾಖಾ ನೆರವಿನಿಂದ ರಕ್ಷಿಸಿ ಮಹಿಳೆಯ ಆಣತಿಯಂತೆ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಬಹಳಷ್ಟು ಸ್ಪಂಧಿಸಿದ ಮಹಿಳೆ ತನ್ನ ಪತಿ ಹಾಗೂ ಕುಟುಂಬಿಕರಿಗಾಗಿ ಹಾತೊರೆಯುತ್ತಿದ್ದರು‌. ಮೊದಲು ಸಹೋದರನೊಬ್ಬ ತನ್ನ ಸಹೋದರಿಯ ಚಿಕಿತ್ಸೆಗೆ ಎಲ್ಲಾ ಸ್ಪಂದಿಸುವೆ ಎಂದು ಗೋಗೆರೆದರೂ ನಂತರದ ದಿನಗಳಲ್ಲಿ ಪೋನ್ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಂಡಿದ್ದರು.

ಚಿಕಿತ್ಸಾವೆಚ್ಚ ಹಾಗೂ ಕ್ಯಾಂಟಿನ್ ವೆಚ್ಚ ರೂ. 54, 000 ಆಗಿದ್ದು ವಿಶುಶೆಟ್ಟಿಯವರ ನಾಲ್ಕೂರಿನ ಹಿತೈಷಿಯೊರ್ವರು 15000 ರೂ . ಆಸ್ಪತ್ರೆಗೆ ನೀಡಿದ್ದು. ಉಳಿದ ಹಣ ರೂ. 39,000 ವಿಶುಶೆಟ್ಟಿ ಭರಿಸಿದರು. ಕಾನೂನು ಪಕ್ರಿಯೆ ಸಖಿ ಸೆಂಟರ್ ಹಾಗೂ ಹೆಬ್ರಿ ಠಾಣೆಯಲ್ಲಿ ನಡೆಯಿತು
ಮಹಿಳೆಗೆ ಎರಡು ತಿಂಗಳ ಹೆಚ್ಚಿನ ಪುನರ್ವಸತಿ ಹಾಗೂ ಚಿಕಿತ್ಸೆಯ ಅಗತ್ಯವಿದ್ದು, ಜವಬ್ದಾರಿ ನಾನು ತೆಗೆದುಕೊಂಡರೂ ಅನುಮತಿ ನೀಡಲು ಸಹೋದರ ಮತ್ತು ಪತಿ ಸ್ಪಂಧಿಸದೆ ಇರುವುದರಿಂದ ಹೆತ್ತವರಿಗೆ ಹಸ್ತಾಂತರಿಸಿದೆ. ವೃದ್ದ ತಂದೆ ತಾಯಿ ಅಸಹಾಯಕರಾಗಿ ದುಃಖಿಸಿದ್ದರು‌. ಮುಂದಿನ ದಿನಗಳಲ್ಲಿ ಪತಿ ಹಾಗೂ ಸಹೋದರ ಸ್ಪಂದಿಸದೇ ಇದ್ದಲ್ಲಿ ವೃದ್ದ ತಂದೆ ತಾಯಿಗೆ ಸ್ಪಂದಿಸುವ ಭರವಸೆ ನೀಡಲಾಗಿದೆ. ಮಹಿಳೆ ತನ್ನ ಪತಿಯ ಬಗ್ಗೆ ಅಳಲು ವ್ಯಕ್ತಪಡಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮವಹಿಸಿ ಮಹಿಳೆಗೆ ನ್ಯಾಯ ಒದಗಿಸಬೇಕಾಗಿದೆ ಎಂದು ವಿಶುಶೆಟ್ಟಿ ಅಂಬಲಪಾಡಿ ಅವರು ತಿಳಿಸಿದರು.

error: No Copying!