Spread the love

ಮಣಿಪಾಲ: ದಿನಾಂಕ:  12/08/2025 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಕಾರನ್ನು  ಅಡ್ಡಾ ದಿಡ್ಡಿ ಯಾಗಿ ಚಲಾಯಿಸಿದ ಕಾರು ಚಾಲಕನನ್ನು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ  ವಿವೇಕಾನಂದ ಬಿ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ವಿವೇಕಾನಂದ ಬಿ ಅವರಿಗೆ ದಿನಾಂಕ:11-08-2025 ರಂದು ಬಂದ ಮಾಹಿತಿಯಂತೆ ಶಿವಳ್ಳಿ ಗ್ರಾಮದ ಅಂಚೆ ಕಛೇರಿ ಎದುರು ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12 ABHUDABI 59440 ನೇ ಆಕಾಶ ನೀಲಿ ಬಣ್ಣದ ವಿದೇಶಿ ಕಾರನ್ನು ಸಂಪೂರ್ಣ ಟಿಂಟ್‌ ಅಳವಡಿಸಿಕೊಂಡು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಸೂಚನೆಯನ್ನು ಉಲ್ಲಂಘಿಸಿ NH 169 A ರಲ್ಲಿ ಅಡ್ಡಾದಿಡ್ಡಿಯಾಗಿ ಜಿಗ್‌ ಜಾಗ್‌ ಆಗಿ ಚಲಾಯಿಸಿಕೊಂಡು ವಿಪರೀತ ಕರ್ಕಶ ಶಬ್ದ ಮಾಡಿಕೊಂಡು ಹೋಗುವಾಗ ಕಾರಿನಲ್ಲಿ ಯಾವುದಾದರೂ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಸಂಶಯಗೊಂಡು ಸಿಬ್ಬಂದಿಯವರೊಂದಿಗೆ ಕಾರನ್ನು ಹಿಂಬಾಲಿಸಿ MIT ಜಂಕ್ಷನ್‌ ಬಳಿ ಕಾರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿದ 12 ABHUDABI 59440 ನೇದರ ಕಾರಿನ ಚಾಲಕನ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 281,125,292 BNS ಮತ್ತು IMV Rlue 51 R/W 177 and Rule 100(2) R/W 177 IMV Act ರಂತೆ ಪ್ರಕರಣ ದಾಖಲಾಗಿದೆ.

error: No Copying!